ಕರ್ನಾಟಕ

karnataka

ETV Bharat / bharat

ಶ್ರೀಲಂಕಾದಲ್ಲಿ ಕೋಲಾಹಲ.. ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಗೋತಬಯ ರಾಜಪಕ್ಸ - ಶ್ರೀಲಂಕಾ ಗಲಭೆ

20 ವಿವಿಐಪಿ ವಾಹನಗಳು ಏರ್​ಪೋರ್ಟ್​ ಕಡೆಗೆ ಹೋಗುತ್ತಿರುವ ಬಗ್ಗೆ ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ  ಹರಿದಾಡುತ್ತಿವೆ. ಮತ್ತೆ ಇನ್ನೊಂದು ಗುಂಪು ಶ್ರೀಲಂಕಾ ನೇವಿಗೆ ಸೇರಿದ ಎರಡು ಬೋಟ್​ಗಳಲ್ಲಿ ಹೊರಟಿದೆ ಎನ್ನಲಾಗಿದೆ. ಆದರೆ, ಈ ಬೋಟ್​ ಹಾಗೂ ವಾಹನಗಳಲ್ಲಿ ಯಾರ್ಯಾರಿದ್ದರು ಎಂಬುದು ಗೊತ್ತಾಗಿಲ್ಲ. ಈ ನಡುವೆ ಅಧ್ಯಕ್ಷ ಗೋತಬಯ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.

SL PM summons emergency meeting as protesters storm President's house
SL PM summons emergency meeting as protesters storm President's house

By

Published : Jul 9, 2022, 6:20 PM IST

ಕೊಲಂಬೊ:ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದು, ಸರ್ಕಾರದ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ದೇಶದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ಎಲ್ಲ ಪಕ್ಷಗಳ ಮುಖಂಡರ ತುರ್ತು ಸಭೆ ಕರೆದಿದ್ದಾರೆ.

ಈ ನಡುವೆ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಧ್ಯಕ್ಷ ಗೋತಬಯ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ದೇಶದ ಪ್ರಸಕ್ತ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಸಂಸತ್ತಿನ ಅಧಿವೇಶನ ಕರೆಯುವಂತೆ ಸ್ಪೀಕರ್​ ಅವರಿಗೆ ಪ್ರಧಾನ ಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಈ ಮಧ್ಯೆ, ಪ್ರಧಾನಿ ರನಿಲ್ ವಿಕ್ರಮಸಿಂಘೆ ರಾಜೀನಾಮೆ ನೀಡಬೇಕೆಂದು ಹಾಗೂ ಬಹುಮತ ಇರುವ ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬರಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಅವರದೇ ಪಕ್ಷದ 16 ಸಂಸದರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಆದರೆ, ಸದ್ಯ ಪ್ರಧಾನಿ ರನಿಲ್ ವಿಕ್ರಮಸಿಂಘೆ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. 20 ವಿವಿಐಪಿ ವಾಹನಗಳು ಏರ್​ಪೋರ್ಟ್​ ಕಡೆಗೆ ಹೋಗುತ್ತಿರುವ ಬಗ್ಗೆ ಸಂದೇಶಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಮತ್ತೆ ಇನ್ನೊಂದು ಗುಂಪು ಶ್ರೀಲಂಕಾ ನೇವಿಗೆ ಸೇರಿದ ಎರಡು ಬೋಟ್​ಗಳಲ್ಲಿ ಹೊರಟಿದೆ ಎನ್ನಲಾಗಿದೆ. ಆದರೆ, ಈ ಬೋಟ್​ ಹಾಗೂ ವಾಹನಗಳಲ್ಲಿ ಯಾರ್ಯಾರಿದ್ದರು ಎಂಬುದು ಗೊತ್ತಾಗಿಲ್ಲ.

ಇದನ್ನು ಓದಿ:ಆಸ್ಟ್ರೇಲಿಯಾ - ಲಂಕಾ ಟೆಸ್ಟ್​: ಗಾಲೆ ಸ್ಟೇಡಿಯಂ ಸುತ್ತುವರಿದ ಪ್ರತಿಭಟನಾಕಾರರು, ರಸ್ತೆಗಿಳಿದ ಜಯಸೂರ್ಯ

ABOUT THE AUTHOR

...view details