ಹೈದರಾಬಾದ್ (ತೆಲಂಗಾಣ): ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು, ಆರು ಮಹಡಿಯಿಂದ ಕೆಳಗೆ ಬಿದ್ದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ಕೆಪಿಎಚ್‌ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಘಟನೆ ನಡೆಯಿತು.
ಪೊಲೀಸರು, ಕೂಲಿಕಾರ್ಮಿಕರು ಮತ್ತು ಸ್ಥಳೀಯರು ತಿಳಿಸಿರುವಂತೆ, ಕೆಪಿಎಚ್‌ಬಿ ಅಡ್ಡಗುಟ್ಟಾದಲ್ಲಿ ದಾಸರಿ ಸಂತೋಷ್ ಅವರು ದಾಸರಿ ಶ್ರೀರಾಮ್ ಹೆಸರಿನಲ್ಲಿ 5 ಅಂತಸ್ತಿನ ಕಟ್ಟಡ ನಿರ್ಮಿಸಲು ಅನುಮತಿ ಪಡೆದುಕೊಂಡಿದ್ದಾರೆ. ಆದರೆ ಅಕ್ರಮವಾಗಿ ಆರನೇ ಮಹಡಿ ನಿರ್ಮಿಸಲಾಗುತ್ತಿದೆ. ಬಿಲ್ಡರ್ ಪಿ.ಶ್ರೀನಿವಾಸ್ ನಾಯ್ಡು ಈ ಕಟ್ಟಡದ ನಿರ್ಮಾತೃ.
ಎರಡು ತಿಂಗಳ ಹಿಂದೆ ಒಡಿಶಾ ರಾಜ್ಯದ ಮಲ್ಕನಗಿರಿ ಜಿಲ್ಲೆಯ ಮುದಿಲಿಪದ ತಾಲೂಕಿನ ಬಡಪದ ಗ್ರಾಮದಿಂದ ಬಂದಿದ್ದ ಆರು ಕಾರ್ಮಿಕರು ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಗುರುವಾರ ಬೆಳಗ್ಗೆ 6:30ಕ್ಕೆ 10 ದಿನಗಳ ಹಿಂದೆ ಎತ್ತರಕ್ಕೆ ನಿರ್ಮಿಸಿದ್ದ ಸಾರಾದ ಮೇಲೆ (ಕಟ್ಟಿಗೆಗಳಿಂದ ಮಾಡಿದ ಆಸರೆ) ನಿಂತಿದ್ದ ಸೆಂಟ್ರಿಂಗ್ ಉಪಕರಣಗಳನ್ನು ಬಿಡಿಸಿ ಕೆಳಗೆ ತರಲಾಗುತ್ತಿತ್ತು. ಬೆಳಗ್ಗೆ 8:30ಕ್ಕೆ ಆರನೇ ಮಹಡಿಯಲ್ಲಿ ನಿರ್ಮಿಸಿದ್ದ ಗೋಡೆ ದಿಢೀರ್ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳು, ಸಾರಾಗೆ ಕಟ್ಟಿದ ಕಟ್ಟಿಗೆಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿವೆ. ಇದರೊಂದಿಗೆ ಇನ್ನಿಬ್ಬರು ಕಾರ್ಮಿಕರಾದ ಸಾಮಾ ಪಟ್ನಾಯಕ್ (23) ಮತ್ತು ಸನ್ಯಾ ಚಲನ್ (19) ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.