ಕರ್ನಾಟಕ

karnataka

ETV Bharat / bharat

ನಟಿಯಾಗಬೇಕೆಂದು ಮನೆ ಬಿಟ್ಟು ಹೋದ 6ನೇ ತರಗತಿ ವಿದ್ಯಾರ್ಥಿನಿ - ಕಾಕಿನಾಡದ ಉದ್ಯಮಿಯೊಬ್ಬರ ಮಗಳು

ಕಾಕಿನಾಡದ ಉದ್ಯಮಿಯೊಬ್ಬರ ಮಗಳು ಚಲನಚಿತ್ರ ನಟಿಯಾಗಬೇಕೆಂದು 1.50 ರೂ. ಹಣ, ಬಟ್ಟೆಯನ್ನು ತೆಗೆದುಕೊಂಡು ಮನೆಬಿಟ್ಟು ಬಂದಿದ್ದು, ಆಕೆಯನ್ನು ರೈಲ್ವೆ ಪೊಲೀಸರು ಮರಳಿ ಪೋಷಕರಿಗೆ ಒಪ್ಪಿಸಿದ್ದಾರೆ.

ಕಾಕಿನಾಡ ರೈಲ್ವೆ ನಿಲ್ದಾಣ
ಕಾಕಿನಾಡ ರೈಲ್ವೆ ನಿಲ್ದಾಣ

By

Published : Feb 21, 2021, 12:17 PM IST

ಆಂಧ್ರಪ್ರದೇಶ: ನಟಿಯಾಗಬೇಕೆಂದು ಬಯಸಿ ಆರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮನೆ ಬಿಟ್ಟು ಹೋದ ಘಟನೆ ಕಾಕಿನಾಡದಲ್ಲಿ ನಡೆದಿದೆ.

ಕಾಕಿನಾಡ ರೈಲ್ವೆ ನಿಲ್ದಾಣ

ಕಾಕಿನಾಡದ ಉದ್ಯಮಿಯೊಬ್ಬರ ಮಗಳು ಚಲನಚಿತ್ರ ನಟಿಯಾಗಬೇಕೆಂದು 1.50 ಲಕ್ಷ ರೂ. ಹಣ, ಬಟ್ಟೆಯನ್ನು ತೆಗೆದುಕೊಂಡು ಮನೆಬಿಟ್ಟು ಕಾಕಿನಾಡ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾಳೆ. ಈ ವೇಳೆ ಮುಂಬೈಗೆ ಟಿಕೆಟ್ ನೀಡುವಂತೆ ಕೇಳಿದ್ದಾಳೆ.

ಬಾಲಕಿಯ ಮೇಲೆ ಅನುಮಾನ ಮೂಡಿಬಂದ ಹಿನ್ನೆಲೆ ರೈಲ್ವೆ ಪೊಲೀಸರು ಆಕೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ, ನಾನು ಚಿತ್ರ ನಟಿಯಾಗಬೇಕು, ಹಾಗಾಗಿ ಮುಂಬೈಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ನಂತರ ಪೊಲೀಸರು ಬಾಲಕಿಗೆ ಬುದ್ದಿ ಹೇಳಿ, ಅವಳನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ABOUT THE AUTHOR

...view details