ಕರ್ನಾಟಕ

karnataka

ETV Bharat / bharat

Rafale: ಫ್ರಾನ್ಸ್‌ನಿಂದ ಭಾರತಕ್ಕೆ ಬಂದ ಆರನೇ ಬ್ಯಾಚ್​ ರಫೇಲ್ ಯುದ್ಧ ವಿಮಾನಗಳು - ರಫೇಲ್ ಜೆಟ್

ಫ್ರಾನ್ಸ್‌ನಿಂದ ಆರನೇ ಬ್ಯಾಚ್​ನ ಮೂರು ರಫೇಲ್ ಫೈಟರ್ ಜೆಟ್​ಗಳು ಭಾರತಕ್ಕೆ ಬಂದಿದ್ದು, ವಾಯುಪಡೆ ಸೇರಲು ಸಜ್ಜಾಗಿವೆ.

Sixth batch of Rafale fighter aircraft lands in India
ಫ್ರಾನ್ಸ್‌ನಿಂದ ಭಾರತಕ್ಕೆ ಬಂದಿಳಿದ ಆರನೇ ಬ್ಯಾಚ್​ನ ರಫೇಲ್ ಯುದ್ಧ ವಿಮಾನಗಳು

By

Published : May 29, 2021, 8:00 AM IST

ನವದೆಹಲಿ: ಭಾರತೀಯ ವಾಯುಪಡೆಯ (ಐಎಎಫ್) ಸಾಮರ್ಥ್ಯ ಇನ್ನಷ್ಟು ಬಲಪಡಿಸಲು ಮತ್ತೆ ಮೂರು ರಫೇಲ್ ಫೈಟರ್ ಜೆಟ್​ಗಳು ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದಿವೆ.

ಫ್ರಾನ್ಸ್‌ನಿಂದ ಬಂದ ಆರನೇ ಬ್ಯಾಚ್​ನ ವಿಮಾನಗಳು ಇದಾಗಿದ್ದು, ಪಶ್ಚಿಮ ಬಂಗಾಳದ ಹಶಿಮರಾದಲ್ಲಿ ರಫೇಲ್ ಜೆಟ್​ಗಳ ಹಾರಾಟ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಐಎಎಫ್ ಮೂಲಗಳು ತಿಳಿಸಿವೆ.

2016ರಲ್ಲಿ ಭಾರತವು, ಫ್ರಾನ್ಸ್‌ ನಿರ್ಮಿತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. 2020ರ ಜುಲೈ 29ರಂದು ಮೊದಲ ಬ್ಯಾಚ್​ನಲ್ಲಿ ಐದು ಜೆಟ್​ಗಳು ದೇಶಕ್ಕೆ ಆಗಮಿಸಿದ್ದವು. ನವೆಂಬರ್​ 3ರಂದು ಎರಡನೇ ಬ್ಯಾಚ್​​ನ ಮೂರು ಜೆಟ್, ​2021 ಜನವರಿ 28ರಂದು ಮೂರನೇ ಬ್ಯಾಚ್​​ನ ಮೂರು ವಿಮಾನಗಳು, ಏಪ್ರಿಲ್​ 1ರಂದು ನಾಲ್ಕನೇ ಬ್ಯಾಚ್​ನ ಮೂರು​ ಹಾಗೂ ಏಪ್ರಿಲ್​ 22ರಂದು ಐದನೇ ಬ್ಯಾಚ್​ನ ನಾಲ್ಕು ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.

ಇದನ್ನೂ ಓದಿ:ಲೇಹ್​ಗೆ IAF ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಭೇಟಿ, ಪರಿಶೀಲನೆ

ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್​ ಯುದ್ಧ ವಿಮಾನಗಳಿಗಿದೆ. 'ಏರ್​​ ಟು ಏರ್'​ ಅಂದರೆ ಬಾನಿನಲ್ಲೇ ಶತ್ರು ಸೇನೆಯ ವಿಮಾನಗಳ ಮೇಲೆ ಬಾಂಬ್ ದಾಳಿ ಮಾಡುವ ಜೊತೆಗೆ 'ಏರ್​ ಟು ಅರ್ತ್'​ ಅಂದರೆ ಆಕಾಶದಿಂದ ಭೂಮಿಯ ಮೇಲಿರುವ ಶತ್ರು ಪಡೆಯ ಮೇಲೂ ಬಾಂಬ್ ಹಾಕುವ ಸಾಮರ್ಥ್ಯವನ್ನು ಈ ಯುದ್ಧ ವಿಮಾನಗಳು ಹೊಂದಿವೆ.

ABOUT THE AUTHOR

...view details