ಕರ್ನಾಟಕ

karnataka

ETV Bharat / bharat

ಅಪಹರಣಗೊಂಡ ಬಾಲಕ ಶವವಾಗಿ ಪತ್ತೆ: ಕಣ್ಣೀರ ಕಡಲಲ್ಲಿ ಕುಟುಂಬ - found laying dead at guntur

ಥಾಡೆಪಲ್ಲಿ ಮಂಡಲದ ಮೆಲ್ಲೆಂಪುಡಿಯ ಭಾರ್ಗವ ತೇಜ ಭಾನುವಾರ ತನ್ನ ನಿವಾಸದಲ್ಲಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ. ಆತ ಬದುಕಿ ಬರುತ್ತಾನೆ ಎಂದುಕೊಂಡಿದ್ದ ಕುಟುಂಬ ಈಗ ಕಣ್ಣೀರಲ್ಲಿ ಮುಳುಗಿದೆ.

A six year boy abducted
ಬದುಕಿ ಬರುತ್ತಾನೆ ಅಂದುಕೊಂಡಿದ್ದ ಕುಟುಂಬದಲ್ಲೀಗ ಬರೀ ಕಣ್ಣಿರು

By

Published : Mar 16, 2021, 7:44 PM IST

ಆಂಧ್ರಪ್ರದೇಶ: ಅಪಹರಣಕ್ಕೊಳಗಾದ ಆರು ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಈ ಘಟನೆ ಜರುಗಿದೆ. ಥಾಡೆಪಲ್ಲಿ ಮಂಡಲದ ಮೆಲ್ಲೆಂಪುಡಿಯ ಭಾರ್ಗವ ತೇಜ ಭಾನುವಾರ ತನ್ನ ನಿವಾಸದಲ್ಲಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ. ಪೋಷಕರು ಮತ್ತು ಸಂಬಂಧಿಕರು ಸುತ್ತಲೂ ಹುಡುಕಿದರೂ ಎಲ್ಲೂ ಸಿಗಲಿಲ್ಲ. ಆದರೆ, ಇಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಇಂದು ಬಾಲಕನ ದೇಹವು ಹತ್ತಿರದ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದೆ. ಹುಡುಗನ ಮುಖದ ಮೇಲೆ ತೀವ್ರವಾದ ಗಾಯವಾಗಿದ್ದು, ಅವನ ಕೈ ಮತ್ತು ಕಾಲ್ಬೆರಳುಗಳೆಲ್ಲವೂ ಮುರಿದ ಸ್ಥಿತಿಯಲ್ಲಿದ್ದವು ಎಂದು ತಿಳಿದುಬಂದಿದೆ.

ಯಾವುದೇ ಪುರಾವೆಗಳು ಸಿಗದಂತೆ ಅಪರಾಧಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಎಂದು ಪೊಲೀಸರು ಹೇಳಿದ್ದು, ಈ ಪ್ರಕರಣವನ್ನು ಸವಾಲಾಗಿ ಪರಿಗಣಿಸಿ, ಭಾರ್ಗವ ತೇಜ ಹತ್ಯೆಗೆ ನ್ಯಾಯ ಕೊಡಿಸಲಾಗುವುದು ಎಂದು ಹೇಳಿದ್ದಾರೆ.

ABOUT THE AUTHOR

...view details