ಗೋಲ್ಪಾರಾ (ಅಸ್ಸೋಂ):ಇಲ್ಲಿನ ಲಕ್ಷ್ಮಿಪುರದ ಸೈರಾಬರಿಯಲ್ಲಿ 6 ಆನೆಗಳು ಹೊಂಡದಲ್ಲಿ ಸಿಲುಕಿ ಮೇಲೆ ಬರಲಾಗದೆ ಪರದಾಡಿದ ಘಟನೆ ನಡೆದಿದೆ. ನಿನ್ನೆ ರಾತ್ರಿಯಿಂದಲೂ ಘೀಳಿಡುತ್ತಾ ನೀರು ತುಂಬಿದ್ದ ಹೊಂಡದಿಂದ ಹೊರ ಬರಲು ಪರದಾಡುತ್ತಿವೆ.
ಹೊಂಡದಲ್ಲಿ ಸಿಲುಕಿ ಒದ್ದಾಡುತ್ತಿರುವ 6 ಕಾಡಾನೆಗಳು : ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ - ನೀರು ತುಂಬಿರುವ ಹೊಂಡದಲ್ಲಿ ಸಿಲುಕಿರುವ ಆನೆಗಳು
ನೀರು ತುಂಬಿರುವ ಹೊಂಡದಲ್ಲಿ ಸಿಲುಕಿರುವ ಆನೆಗಳ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇದಕ್ಕೂ ಮೊದಲು ಇದೇ ಹೊಂಡದೊಳಗೆ ಸಿಲುಕಿದ್ದ ಐದು ಆನೆಗಳನ್ನು ರಕ್ಷಿಸಿ ಕಾಡಿಗೆ ಬಿಡಲಾಗಿತ್ತು..

ಹೊಂಡದಲ್ಲಿ ಸಿಲುಕಿ ಒದ್ದಾಡುತ್ತಿರುವ 6 ಕಾಡಾನೆಗಳು
ಹೊಂಡದಲ್ಲಿ ಸಿಲುಕಿ ಒದ್ದಾಡುತ್ತಿರುವ 6 ಕಾಡಾನೆಗಳು..
ಬಳಿಕ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆನೆಗಳ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಬುಧವಾರ ರಾತ್ರಿ ಸಹ ಇದೇ ಹೊಂಡದಲ್ಲಿ 5 ಆನೆಗಳು ಸಿಲುಕಿದ್ದವು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನ ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ:ಹಳಿ ತಪ್ಪಿದ ಯಶವಂತಪುರ-ಹೌರಾ ಡುರಾಂಟೊ ಎಕ್ಸ್‌ಪ್ರೆಸ್ : ಪ್ರಯಾಣಿಕರು ಪಾರು