ಕರ್ನಾಟಕ

karnataka

ETV Bharat / bharat

ಯೂಟ್ಯೂಬ್​ ನೋಡಿ ಸ್ಫೋಟಕ ತಯಾರಿಸಿ, ಪ್ರಯೋಗಿಸಿದ ಬಾಲಕರು: ಶಾಲಾ ವಾಹನಕ್ಕೆ ಹಾನಿ - ಸ್ಫೋಟಕ ಪರೀಕ್ಷೆ ನಡೆಸಿದ ಬಾಲಕರು

ಪುದುಚೇರಿಯಲ್ಲಿ ಆರು ಜನ ಅಪ್ರಾಪ್ತರು ಯೂಟ್ಯೂಬ್​ ನೋಡಿ ಎರಡು ಸ್ಫೋಟಕ ತಯಾರಿಸಿದ್ದಾರೆ. ನಂತರ ಅವುಗಳನ್ನು ರಸ್ತೆಗೆ ಬಂದು ಪ್ರಯೋಗಿಸಿದ್ದು, ಇದರಿಂದ ಶಾಲಾ ವಾಹನದ ಗಾಜು ಒಡೆದಿದೆ.

six-students-arrested-for-making-testing-explosive-devices-in-puducherry
ಯೂಟ್ಯೂಬ್​ ನೋಡಿ ಸ್ಫೋಟಕ ತಯಾರಿಸಿ, ಪ್ರಯೋಗಿಸಿದ ಬಾಲಕರು: ಶಾಲಾ ವಾಹನಕ್ಕೆ ಹಾನಿ

By

Published : Jan 10, 2023, 8:28 PM IST

ಪುದುಚೇರಿ:ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಆರು ಜನ ಬಾಲಕರು ತಾವೇ ಸ್ಫೋಟಕಗಳನ್ನು ತಯಾರಿಸಿ, ಅವುಗಳನ್ನು ಪ್ರಯೋಗಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಅಪ್ರಾಪ್ತರು ಯೂಟ್ಯೂಬ್​ ನೋಡಿಕೊಂಡು ತಾವು ತಯಾರಿಸಿದ ಎರಡು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳನ್ನು ಎಸೆದಿದ್ದಾರೆ. ಇದರ ಪರಿಣಾಮ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಶಾಲಾ ವಾಹನಕ್ಕೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಬಾಲಾಜಿ ಥಿಯೇಟರ್ ಬಳಿಯ ಶಾಂತಿನಗರ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಆರು ಜನ ಆರೋಪಿಗಳ ಪೈಕಿ ಈಗಾಗಲೇ ನಾಲ್ವರು ಬಾಲಕರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಈ ಅಪ್ರಾಪ್ತರು ಬೆಣಚುಕಲ್ಲು ಮತ್ತು ಪಟಾಕಿಗಳಿಂದ ಸಿದ್ಧಪಡಿಸಿದ ಎರಡು ಸ್ಫೋಟಕ ಸಾಧನಗಳನ್ನು ಪರೀಕ್ಷಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಇನ್ಸ್‌ಪೆಕ್ಟರ್ ಬಾಬೂಜಿ ಹೇಳಿದ್ದಾರೆ.

ಇಬ್ಬರು 10ನೇ ತರಗತಿಯಲ್ಲಿ ವಿದ್ಯಾರ್ಥಿಗಳು: ಸುಧಾರಿತ ಸ್ಫೋಟಕ ಸಾಧನಗಳನ್ನು ತಯಾರಿಸಿದ್ದ ಎಲ್ಲರೂ ಸಹ 16ರಿಂದ 18 ವರ್ಷ ವಯಸ್ಸಿನವರಾಗಿದ್ದಾರೆ. ಈ ಆರು ಮಂದಿಯಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳು, ಓರ್ವ ಪಾಲಿಟೆಕ್ನಿಕ್ ವಿದ್ಯಾರ್ಥಿ, ಮತ್ತೊಬ್ಬ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಮತ್ತು ಇಬ್ಬರು ಅರ್ಧಕ್ಕೆ ಶಾಲೆ ಬಿಟ್ಟಿರುವ ಬಾಲಕರಾಗಿದ್ದಾರೆ. ಆರೋಪಿಗಳಾದ ಶಾಲಾ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಒಟ್ಟಿಗೆ ಓದುತ್ತಿರುವ ಸಹಪಾಠಿಗಳಾಗಿದ್ದಾರೆ. ಈ ಎಲ್ಲರೂ ಕನ್ ಡಾಕ್ಟರ್ ತೊಟ್ಟಂ ಪ್ರದೇಶದ ನಿವಾಸಿಗಳೆಂದು ಇನ್ಸ್​ಪೆಕ್ಟರ್​​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಜಾರ್ಖಂಡ್‌: ಮಾರುಕಟ್ಟೆ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕ್​ನಲ್ಲಿ ಬಾಂಬ್ ಸ್ಫೋಟ

ಯೂಟ್ಯೂಬ್​ ನೋಡಿ ಸ್ಫೋಟಕ ತಯಾರಿಕೆ: ಮತೊಬ್ಬರು ಆತಂಕಕಾರಿ ಅಂಶ ಎಂದರೆ ಈ ಬಾಲಕರು ಯೂಟ್ಯೂಬ್​ ವಿಡಿಯೋಗಳನ್ನು ನೋಡುವ ಮೂಲಕ ಸ್ಫೋಟಕ ಸಾಧನಗಳನ್ನು ತಯಾರಿಸುವುದನ್ನು ಕಲಿತಿದ್ದಾರೆ. ಈ ವಿಡಿಯೋಗಳ ಪ್ರೇರಿತವಾಗಿಯೇ ಬೆಣಚುಕಲ್ಲು ಮತ್ತು ಪಟಾಕಿಗಳಿಂದ ಎರಡು ಸ್ಫೋಟಕ ಸಾಧನಗಳನ್ನು ಸಿದ್ಧಪಡಿಸಿದ್ದಾರೆ. ಭಾನುವಾರ ರಾತ್ರಿ ಎಲ್ಲ ಆರು ಕೂಡ ರಸ್ತೆಯಲ್ಲಿ ಜಮಾಯಿಸಿ ಸ್ಫೋಟಕಗಳನ್ನು ಎಸೆದಿರುವುದಾಗಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ವಿವರಿಸಿದ್ದಾರೆ.

ದೊಡ್ಡ ಮಟ್ಟದಲ್ಲಿ ಕೇಳಿದ ಸ್ಪೋಟದ ಸದ್ದು: ಎರಡು ಸ್ಫೋಟಕಗಳನ್ನು ಹಿಡಿದು ಬಂದಿದ್ದ ಆರೋಪಿಗಳು ರಸ್ತೆಯಲ್ಲೇ ಅವುಗಳನ್ನು ಪರೀಕ್ಷಿಸಿದ್ದಾರೆ. ಈ ವೇಳೆ ಮೊದಲನೆಯದು ಹೆಚ್ಚು ಪರಿಣಾಮವಿಲ್ಲದೆ ಸಿಡಿದಿದೆ. ಆದರೆ, ಎರಡನೆಯದು ಸಾಧನವು ದೊಡ್ಡ ಪರಿಣಾಮದೊಂದಿಗೆ ಸ್ಫೋಟಿಸಿದೆ. ಸ್ಫೋಟದ ಸದ್ದು ಕೇಳಿ ಸ್ಥಳೀಯರು ಹೊರ ಬಂದು ನೋಡಿದಾಗ ಶಾಲಾ ವಾಹನದ ಗಾಜು ಒಡೆದಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಬೆಣಚುಕಲ್ಲುಗಳು ಮತ್ತು ಪಟಾಕಿಗಳನ್ನು ಹೊರತುಪಡಿಸಿ ಬೇರೇನೂ ಇಲ್ಲದ ಕಾರಣ ಸ್ಫೋಟವು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಆಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಓರ್ವ ಆಟೋರಿಕ್ಷಾ ಚಾಲಕನ ಮಗ: ಸ್ಫೋಟದ ವಿಷಯ ತಿಳಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಸಿಬ್ಬಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ನಂತರ ಸಿಸಿಟಿವಿ ಫೂಟೇಜ್​ ಜಾಲಾಡಿದ್ದು, ಆಗ ಸ್ಫೋಟ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಆರು ಜನ ಬಾಲಕರೂ ಸಹ ಓಡಿ ಹೋಗಿರುವುದನ್ನು ಪತ್ತೆಯಾಗಿದೆ. ಆರು ಮಂದಿ ಬಾಲಕರಲ್ಲಿ ಯಾರೊಬ್ಬರೂ ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ಆದರೆ, ಓರ್ವ ಮಾತ್ರ ಆಟೋರಿಕ್ಷಾ ಚಾಲಕನ ಮಗನಾಗಿದ್ದಾನೆ. ಈಗಗಲೇ ಬಂಧಿತ ನಾಲ್ವರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ ಇನ್ಸ್‌ಪೆಕ್ಟರ್ ಬಾಬೂಜಿ ತಿಳಿಸಿದ್ದಾರೆ.

ಇದನ್ನೂ ಓದಿ:ಗಲ್ಫ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ 500ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ವಂಚನೆ: ರಾತ್ರೋರಾತ್ರಿ ಏಜೆಂಟ್​ ಪರಾರಿ

ABOUT THE AUTHOR

...view details