ಮಹಾರಾಷ್ಟ್ರ: ರತ್ನಗಿರಿ ತಾಲೂಕಿನ ಜೈಗಢದಿಂದ ನಾವಿಡ್-2 ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸುಮಾರು ಆರು ನಾವಿಕರು ನಾಪತ್ತೆಯಾಗಿದ್ದಾರೆ.
ಐದು ದಿನ ಕಳೆದರೂ ಮೀನುಗಾರಿಕೆಗೆ ತೆರಳಿದ್ದ ದೋಣಿ ವಾಪಸ್ ಬಾರದ ಹಿನ್ನೆಲೆ ಬೋಟ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮೀನುಗಾರಿಕಾ ಬೋಟ್ ಜೈಗಢದ ನಾಸಿರ್ ಹುಸೇನ್ ಮಿಯಾನ್ ಸಂಸಾರೆ ಎಂಬುವರ ಮಾಲೀಕತ್ವದ್ದಾಗಿದೆ.