ಕರ್ನಾಟಕ

karnataka

ETV Bharat / bharat

ಪ್ರತ್ಯೇಕ ರಸ್ತೆ ಅಪಘಾತ : ಆರು ಮಂದಿ ದುರ್ಮರಣ - ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ಅಪಘಾತ

ಮತ್ತೊಂದು ಪ್ರಕರಣದಲ್ಲಿ ಕಾರೊಂದು ಖಾಸಗಿ ಬಸ್​ಗೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ದಮಗಟ್ಲಾ ಕ್ರಾಸ್ ರೋಡ್​ನಲ್ಲಿ ಈ ಘಟನೆ ನಡೆದಿದ್ದು, ಬಸ್​ನಲ್ಲಿದ್ದ 15 ಮಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಇದರ ಜೊತೆಗೆ ಆತ್ಮಕೂರು ಎಂಬಲ್ಲಿ ಬೈಕ್ ಸವಾರ ಮರಕ್ಕೆ ಅಪ್ಪಳಿಸಿ, ಮೃತಪಟ್ಟಿದ್ದಾನೆ..

ಆರು ಮಂದಿ ದುರ್ಮರಣ
ಆರು ಮಂದಿ ದುರ್ಮರಣ

By

Published : Feb 11, 2022, 4:25 PM IST

Updated : Feb 12, 2022, 12:17 PM IST

ಕರ್ನೂಲ್(ಆಂಧ್ರಪ್ರದೇಶ) :ಪ್ರತ್ಯೇಕವಾಗಿ ನಡೆದ ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಹೆದ್ದಾರಿಯ ಉಳಂಡಿಕೊಂಡ ಎಂಬಲ್ಲಿ ನಿಂತಿದ್ದ ಟ್ರಕ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರಿನಲ್ಲಿದ್ದವರು ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಮೃತರನ್ನು ಶ್ರೀನಿವಾಸಲು, ಆದಿಲಕ್ಷ್ಮಿ, ಭಾಗ್ಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಕುಮಾರ್, ಆಂಜನೇಯಲು, ಧರಣಿ ಎಂಬುವರು ಗಾಯಗೊಂಡು ಕರ್ನೂಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುಟುಂಬ ಧರ್ಮಾವರಂನಿಂದ ಕರ್ನೂಲ್ ಕಡೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಕಾರೊಂದು ಖಾಸಗಿ ಬಸ್​ಗೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ದಮಗಟ್ಲಾ ಕ್ರಾಸ್ ರೋಡ್​ನಲ್ಲಿ ಈ ಘಟನೆ ನಡೆದಿದ್ದು, ಬಸ್​ನಲ್ಲಿದ್ದ 15 ಮಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಇದರ ಜೊತೆಗೆ ಆತ್ಮಕೂರು ಎಂಬಲ್ಲಿ ಬೈಕ್ ಸವಾರ ಮರಕ್ಕೆ ಅಪ್ಪಳಿಸಿ, ಮೃತಪಟ್ಟಿದ್ದಾನೆ.

ಇದನ್ನೂ ಓದಿ:ಜಮೀನು ವಿವಾದ: ಮೂವರನ್ನು ಸಜೀವವಾಗಿ ಸುಡಲು ಯತ್ನ... Viral video

Last Updated : Feb 12, 2022, 12:17 PM IST

ABOUT THE AUTHOR

...view details