ಜಮ್ಮು: ಒಂದೇ ಕುಟುಂಬದ ಆರು ಮಂದಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಇಂದು ಬೆಳಗ್ಗೆ ಜಮ್ಮುವಿನ ಸುದ್ರಾ ಪ್ರದೇಶದಲ್ಲಿ ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಜಮ್ಮು ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದಾರೆ.
ಮೃತರನ್ನು ನೂರ್ ಉಲ್ ಹಬೀಬ್ S/O ಹಬೀಬ್ ಉಲ್ಲಾ, ಸಕೀನಾ ಬೇಗಂ W/O ಗುಲಾಮ್ ಹಾಸನ, ಸಜಾದ್ ಅಹ್ಮದ್ S/O ಫಾರೂಕ್ ಅಹ್ಮದ್ ಮಗ್ರೆ, ನಸ್ಸೆಮಾ ಅಖ್ತರ್ D/O ಗುಲಾಮ್ ಹಾಸನ, ರುಬಿನಾ ಬಾನೋ D/O ಜಿ.ಹೆಚ್ ಹುಸೇನ್ ಮತ್ತು ಜಾಫರ್ ಸಲೀಂ S/O ಜಿ.ಹೆಚ್ ಹುಸೇನ್ ಎಂದು ಗುರುತಿಸಲಾಗಿದೆ.