ದೋಡಾ(ಜಮ್ಮು-ಕಾಶ್ಮೀರ):ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಮಿಸ್ ಬಸ್ವೊಂದು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಜಮ್ಮು-ಕಾಶ್ಮೀರದ ದೋಡಾದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡವರನ್ನ ಈಗಾಗಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಸ್ ದೋಡಾದಿಂದ ಚಿಲ್ಲಿ ಪ್ರದೇಶಕ್ಕೆ ತೆರಳುತ್ತಿತ್ತು.