ನವದೆಹಲಿ:ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿರುವ ಘಟನೆ ಇಲ್ಲಿನ ಬಿಜ್ವಾಸನ್ ನಗರದಲ್ಲಿ ನಡೆದಿದೆ.
ಕೊಳೆಗೇರಿಯಲ್ಲಿ ಅಗ್ನಿ ಅವಘಡ... ಒಂದೇ ಕುಟುಂಬದ ಆರು ಮಂದಿ ಸಜೀವ ದಹನ! - ದೆಹಲಿ ಬೆಂಕಿ ಸುದ್ದಿ,
ಎರಡು ಕೊಳಗೇರಿ ಪ್ರದೇಶಗಳು ಬೆಂಕಿಯಿಂದ ಸುಟ್ಟು ಹೋಗಿದ್ದು, ಒಂದೇ ಕುಟುಂಬದ ಆರು ಜನ ಸಜೀವ ದಹನವಾಗಿರುವ ಘಟನೆ ನೈಋತ್ಯ ದೆಹಲಿಯಲ್ಲಿ ನಡೆದಿದೆ.
![ಕೊಳೆಗೇರಿಯಲ್ಲಿ ಅಗ್ನಿ ಅವಘಡ... ಒಂದೇ ಕುಟುಂಬದ ಆರು ಮಂದಿ ಸಜೀವ ದಹನ! SIX PEOPLE DIED, SIX PEOPLE DIED IN MASSIVE FIRE, SIX PEOPLE DIED IN MASSIVE FIRE IN DELHI, Delhi crime news, Delhi fire news, ಆರು ಜನ ಸಾವು, ಬೆಂಕಿ ಅವಘಡದಲ್ಲಿ ಆರು ಜನ ಸಾವು, ದೆಹಲಿಯಲ್ಲಿ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಆರು ಜನ ಸಾವು, ದೆಹಲಿ ಅಪರಾಧ ಸುದ್ದಿ, ದೆಹಲಿ ಬೆಂಕಿ ಸುದ್ದಿ,](https://etvbharatimages.akamaized.net/etvbharat/prod-images/768-512-11576113-485-11576113-1619673070755.jpg)
ಒಂದೇ ಕುಟುಂಬದ ಆರು ಜನ ಬೆಂಕಿಗಾಹುತಿ
ಇಲ್ಲಿನ ಟ್ರಾನ್ಸ್ಫಾರ್ಮರ್ ಬಳಿಯ ಎರಡು ಕೊಳೆಗೇರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಕೊಳೆಗೇರಿ ಪ್ರದೇಶ ಸಂಪೂರ್ಣ ಭಸ್ಮವಾಗಿದ್ದು, ಈ ಅವಘಡದಲ್ಲಿ ಒಂದೇ ಕುಟುಂಬದ ಆರು ಜನ ಬೆಂಕಿಗಾಹುತಿಯಾಗಿದ್ದಾರೆ.
ಇನ್ನು ಈ ಘಟನೆ ಸಿಲಿಂಡರ್ ಬ್ಲಾಸ್ಟ್ ಆಗಿರುವುದರಿಂದ ಸಂಭವಿಸಿತ್ತು. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಆದ್ರೂ ಸಹ ನಾವು ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಡಿಸಿಪಿ ಇಂಗಿತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.