ಕರ್ನಾಟಕ

karnataka

ETV Bharat / bharat

ನಡ್ಕೊಂಡು ದೇವಸ್ಥಾನಕ್ಕೆ ಹೋಗ್ತಿದ್ದಾಗ ಹರಿದ ಕಾರು: 6 ಮಂದಿ ಸಾವು, ಹಲವರಿಗೆ ಗಾಯ - Etv bharat kannada

ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಇನ್ನೋವಾ ಕಾರು ಹರಿದು ಗುಜರಾತ್‌ನಲ್ಲಿ ಭೀಕರ ಅವಘಡ ಸಂಭವಿಸಿದೆ.

Six people died in an accident
Six people died in an accident

By

Published : Sep 2, 2022, 9:44 AM IST

Updated : Sep 2, 2022, 12:06 PM IST

ಅರಾವಳಿ(ಗುಜರಾತ್​):ಬೆಳ್ಳಂಬೆಳಗ್ಗೆ ವಿಧಿಯಾಟಕ್ಕೆ ಆರು ಮಂದಿ ಭಕ್ತರು ದುರ್ಮರಣ ಹೊಂದಿದ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಅರಾವಳಿ ಜಿಲ್ಲೆಯ ಮಾಲ್ಪುರ್​ ಎಂಬಲ್ಲಿನ ಕೃಷ್ಣನಗರದ ಅಂಬಾಜಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗ್ತಿದ್ದ ಭಕ್ತರ ಮೇಲೆ ವೇಗವಾಗಿ ಬಂದ ಇನ್ನೋವಾ ಕಾರು ಹರಿದಿದೆ. ಪರಿಣಾಮ, ಆರು ಮಂದಿ ಸಾವಿಗೀಡಗಿದ್ದಾರೆ. ಅಲ್ಲದೇ ಇತರೆ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡ್ಕೊಂಡು ದೇವಸ್ಥಾನಕ್ಕೆ ಹೋಗ್ತಿದ್ದಾಗ ಹರಿದ ಕಾರು

ಇದನ್ನೂ ಓದಿ: ಆಮ್‌ ಆದ್ಮಿ ಪಕ್ಷದ ಶಾಸಕಿಗೆ ಎಲ್ಲರೆದುರೇ ಕಪಾಳಮೋಕ್ಷ ಮಾಡಿದ ಪತಿ: ವಿಡಿಯೋ ವೈರಲ್​​

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರೆಲ್ಲರೂ ದಾಹೋದ್​​ನ ಲಿಮ್ಖೇಡಾ ಮತ್ತು ಮಾಲ್​​ಪುರದವರು ಎಂದು ಗುರುತಿಸಲಾಗಿದೆ.

ಪರಿಹಾರ ಘೋಷಿಸಿದ ಮುಖ್ಯಮಂತ್ರಿ: ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​​ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರಿಗೆ 4 ಲಕ್ಷ ರೂ ಹಾಗೂ ಗಾಯಗೊಂಡಿರುವರಿಗೆ 50 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಘಟನೆಯ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.

Last Updated : Sep 2, 2022, 12:06 PM IST

ABOUT THE AUTHOR

...view details