ಕರ್ನಾಟಕ

karnataka

ETV Bharat / bharat

ರಾತ್ರಿ ಮಲಗಿದ್ದ ವೇಳೆ ಸುಟ್ಟು ಕರಕಲಾದ 6 ಜನ.. ಕಾರಣ ನಿಗೂಢ! - ಗುಂಟೂರು ಸುದ್ದಿ,

ರಾತ್ರಿ ಮಲಗಿದ್ದ ವೇಳೆ ಆರು ಜನರು ಸುಟ್ಟು ಕರಕಲಾಗಿರುವ ಘಟನೆ ಆಂಧ್ರಪದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

Six people died, Six people died in a suspicious condition, Six people died in a suspicious condition at Guntur, Guntur news, Guntur crime news, ಆರು ಜನ ಸಾವು, ಗುಂಟೂರಿನಲ್ಲಿ ಆರು ಜನ ಸಾವು, ಗುಂಟೂರಿನಲ್ಲಿ ಅನುಮಾನಸ್ಪದವಾಗಿ ಆರು ಜನ ಸಾವು, ಗುಂಟೂರು ಸುದ್ದಿ, ಗುಂಟೂರು ಅಪರಾಧ ಸುದ್ದಿ,
ದುರಂತ

By

Published : Jul 30, 2021, 10:52 AM IST

Updated : Jul 30, 2021, 11:00 AM IST

ಗುಂಟೂರು (ಆಂಧ್ರಪ್ರದೇಶ) : ದುರಂತ ಘಟನೆಯೊಂದು ಸಂಭವಿಸಿ ಆರು ಜನ ಸುಟ್ಟು ಕರಕಲಾದ ಘಟನೆ ರೆಪಲ್ಲೆ ತಾಲೂಕಿನ ಲಂಕವಾನಿದಿಬ್ಬ ಬಳಿ ನಡೆದಿದೆ. ರಾತ್ರಿ ಮಲಗಿದ್ದ ವೇಳೆ ಕರೆಂಟ್​ ತಂತಿ ಶೆಡ್​ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ರಾತ್ರಿ ಮಲಗಿದ್ದ ವೇಳೆ ಸುಟ್ಟು ಕರಕಲಾದ ಆರು ಜನರು

ಮೃತರು ರಾಮಮೂರ್ತಿ, ಕಿರಣ್​, ಮನೋಜ್​, ವಂಡಬೋ, ಮಹೇಂದ್ರ, ಒಡಿಶಾ ನಿವಾಸಿ ನವೀನ್​ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಘಟನೆಯ ಕಾರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆದ್ರೆ ಬೆಂಕಿ ಇಲ್ಲದೆ ಶೆಡ್​ ಒಳ ಭಾಗದಲ್ಲಿ ಸುಟ್ಟಿರುವುದರ ಬಗ್ಗೆ ವಿದ್ಯುತ್​ ಇಲಾಖೆ ಅಧಿಕಾರಿಗಳು ಹೇಳೋದೇ ಬೇರೆಯಾಗಿದೆ.

ಈ ದುರ್ಘಟನೆಗೆ ಶಾಕ್​ ಸರ್ಕ್ಯೂಟ್​ ಕಾರಣವಾಗಿಲ್ಲ. ಶೆಡ್​ನಲ್ಲಿರುವ ರಾಸಾಯನಿಕದಿಂದ ಈ ಘಟನೆ ನಡೆದಿರಬಹುದೆಂದು ಎಂದು ವಿದ್ಯುತ್​ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಹೀಗಾಗಿ ಈ ಘಟನೆ ಮೇಲೆ ಬಹಳಷ್ಟು ಅನುಮಾನಗಳು ಮೂಡುತ್ತಿವೆ. ಘಟನಾ ಸ್ಥಳಕ್ಕೆ ಮಾಧ್ಯಮಗಳಿಗೆ ಪೊಲೀಸರು ಅನುಮತಿ ನೀಡುತ್ತಿಲ್ಲ.

Last Updated : Jul 30, 2021, 11:00 AM IST

ABOUT THE AUTHOR

...view details