ಪಾಟ್ನಾ (ಬಿಹಾರ): ದೇಶಾದ್ಯಂತ ಕೊರೊನಾ ಸಾವುಗಳು ಒಂದೆಡೆಯಾದರೆ, ಬಿಹಾರದಲ್ಲಿ ಸಿಡಿಲ ಬಡಿತಕ್ಕೆ ಇಂದು 6 ಮಂದಿ ಬಲಿಯಾಗಿದ್ದಾರೆ.
ಸಿಡಿಲು ಬಡಿದು ಆರು ಮಂದಿ ಸಾವು - ಬಿಹಾರದಲ್ಲಿ ಸಿಡಿಲು
ಪಾಟ್ನಾದಲ್ಲಿ ಸೋಮವಾರ ಸಂಭವಿಸಿದ ಸಿಡಿಲಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಹಾಗೇ ಸುಪಾಲ್, ದರ್ಭಂಗಾ, ಮಾಧೇಪುರ ಮತ್ತು ಮುಜಾಫರ್ಪುರ ಎಂಬ ಪ್ರದೇಶಗಳಲ್ಲಿ ತಲಾ ಒಬ್ಬರಂತೆ ಗುಡುಗು ಸಹಿತ ಮಳೆಯಿಂದಾಗಿ ಒಟ್ಟಾರೆ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸಿಡಿಲು
ಪಾಟ್ನಾದಲ್ಲಿ ಸೋಮವಾರ ಸಂಭವಿಸಿದ ಸಿಡಿಲಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಹಾಗೇ ಸುಪಾಲ್, ದರ್ಭಂಗಾ, ಮಾಧೇಪುರ ಮತ್ತು ಮುಜಾಫರ್ಪುರ ಎಂಬ ಪ್ರದೇಶಗಳಲ್ಲಿ ತಲಾ ಒಬ್ಬರಂತೆ ಗುಡುಗು ಸಹಿತ ಮಳೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಇಲ್ಲಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಬಿಹಾರದ ಹವಾಮಾನವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಈ ಕಾರಣದಿಂದಾಗಿ, ಮೇ 12 ರೊಳಗೆ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಕಳೆದೆರಡು ದಿನಗಳಿಂದ ಗುಡುಗು ಸಿಡಿಲಿನಿಂದ ಏಳು ಜನರು ಸಾವನ್ನಪ್ಪಿದ್ದಾರೆ.