ಬಿಲಾಸ್ಪುರ್ (ಛತ್ತೀಸ್‌ಗಡ):ಇಲ್ಲಿನ ಟ್ರಾನ್ಸ್‌ಪೋರ್ಟ್ ನಗರದ ಹೋಟೆಲ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಯುವತಿಯರು, ಮೂವರು ಯುವಕರು, ದಂಧೆ ನಡೆಸುತ್ತಿದ್ದ ಮಹಿಳೆ ಹಾಗೂ ಹೋಟೆಲ್ ಸಿಬ್ಬಂದಿಯನ್ನೂ ಸಹ ಪೊಲೀಸರು ಬಂಧಿಸಲಾಗಿದೆ.
ಆರೋಪಿಗಳಿಂದ 10 ಮೊಬೈಲ್ ಫೋನ್ ಮತ್ತು 14 ಸಾವಿರ ರೂ. ಹಾಗೂ ಎರಡು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ನಗರದ ಹಲವು ಹೋಟೆಲ್ಗಳಲ್ಲಿ ಅವ್ಯಾಹತವಾಗಿ ಮಾಂಸ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೊರಗಿನಿಂದ ಹುಡುಗಿಯರನ್ನು ಕರೆದುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.