ಪಿಥೋರಗಢ (ಉತ್ತರಾಖಂಡ):ಭಾರತದಿಂದ ನೇಪಾಳದಲ್ಲಿರುವ ತಮ್ಮ ಮನೆಗಳಿಗೆ ಮರಳುತ್ತಿದ್ದ ಕಾರ್ಮಿಕರ ವಾಹನ ಅಪಘಾತಕ್ಕೆ ಒಳಗಾಗಿದೆ. ಉತ್ತರಾಖಂಡದ ಗಡಿ ಜಿಲ್ಲೆ ಪಿಥೋರಗಢ್ ಪಕ್ಕದ ನೇಪಾಳಿ ಪ್ರದೇಶದಲ್ಲಿ ಭಾರಿ ಅಪಘಾತ ಸಂಭವಿಸಿದೆ. ಆರು ನೇಪಾಳಿ ಕಾರ್ಮಿಕರು ಮೃತಪಟ್ಟಿದ್ದಾರೆ. ಪಿಥೋರಗಢ ಜಿಲ್ಲೆಯ ಧಾರ್ಚುಲಾ ಬಳಿ ನೇಪಾಳದಲ್ಲಿ ದುರ್ಘಟನೆ ಸಂಭವಿಸಿದೆ. ಐವರು ವಾಹನದಿಂದ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ:ಡಿವೈಡರ್ಗೆ ಗುದ್ದಿ ಪಲ್ಟಿಯಾದ ಬಸ್.. 15 ಪ್ರಯಾಣಿಕರಿಗೆ ಗಾಯ: ಭೀಕರ ವಿಡಿಯೋ
ಮಾಹಿತಿಯ ಪ್ರಕಾರ, ಎಲ್ಲರೂ ಧಾರ್ಚುಲಾದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ತಡರಾತ್ರಿ ವಾಹನದಲ್ಲಿ ಹೊರಟಿದ್ದರು. ವಿಶುಪತಿ ಹಬ್ಬವನ್ನು ಆಚರಿಸಲು ಭಾರತದಿಂದ ನೇಪಾಳದಲ್ಲಿರುವ ತಮ್ಮ ಮನೆಗೆ ಪ್ರಯಾಣ ಬೆಳೆಸಿದ್ದರು. ಧಾರ್ಚುಲಾದಿಂದ ಭಾರತದ ಗಡಿಯನ್ನು ದಾಟಿ ನೇಪಾಳ ಪ್ರವೇಶಿಸಿದ ತಕ್ಷಣ, ಅವರಿದ್ದ ವಾಹನವು ಜುಲಾಘಾಟ್‌ನ ಬಜಾಂಗ್ ಬಳಿಯ ಕಂದಕಕ್ಕೆ ಉರುಳಿ ಬಿದ್ದಿದೆ. ಮಂಗಳವಾರ ತಡರಾತ್ರಿ 11.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಐವರು ಕಾರ್ಮಿಕರು ವಾಹನದಿಂದ ಜಿಗಿದಿದ್ದು, ಆರು ಮಂದಿ ಕಾರ್ಮಿಕರು ವಾಹನ ಸಮೇತ ಆಳವಾದ ಕಂದಕದಲ್ಲಿ ಬಿದ್ದಿದ್ದಾರೆ.
ಇದನ್ನೂ ಓದಿ:ಮ್ಯಾನ್ಮಾರ್ನಲ್ಲಿ ಸೇನೆಯಿಂದ ಹಳ್ಳಿ ಮೇಲೆ ವೈಮಾನಿಕ ಬಾಂಬ್ ದಾಳಿ: 100ಕ್ಕೂ ಹೆಚ್ಚು ಜನರು ಬಲಿ