ಹಿಂಗೋಲಿ(ಮಹಾರಾಷ್ಟ್ರ):ಎಷ್ಟೇ ಮೂಢನಂಬಿಕೆಗೆ ಕಡಿವಾಣ ಹಾಕಲು ಹಾಕಿದರೂ ಒಂದಲ್ಲಾ ಒಂದು ಮೂಢನಂಬಿಕೆ ಆಚರಣೆ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಸೆಂಗಾಂವ್ ತಾಲೂಕಿನ ಕಪಾಡಸಿಂಗಿಯಲ್ಲಿ ಅಂತಹದೊಂದು ಮೂಢನಂಬಿಕೆಯ ಪ್ರಕರಣ ಬೆಳಕಿಗೆ ಬಂದಿದೆ. ಹಣೆಯ ಮೇಲೆ ಕೆಂಪು ಮತ್ತು ಹಳದಿ ಬಣ್ಣಗಳು ಕಾಣಿಸಿಕೊಂಡಿವೆ ಎನ್ನುವ ಕಾರಣಕ್ಕೆ ಆರು ತಿಂಗಳ ಹೆಣ್ಣು ಮಗುವನ್ನು ದೇವಿಯ ಅವತಾರವೆಂದು ಪೂಜಿಸಲಾಗುತ್ತಿದೆ.
ಅಷ್ಟೇ ಅಲ್ಲದೆ ಮಗುವಿನ ದರ್ಶನ ಪಡೆಯಲು ಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಜನ ಬರುತ್ತಿದ್ದಾರೆ. ಇಲ್ಲಿಗೆ ಬರುವ ಮಹಿಳೆಯರ ಮೈಮೇಲೆ ಬರುತ್ತಿರುವ ದೃಶ್ಯಗಳೂ ಸದ್ಯ ಈ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.