ತಿರುವನಂತಪುರ (ಕೇರಳ): ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಪ್ರಕರಣ ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುವ ಉದ್ದೇಶದಿಂದ ಕೇಂದ್ರದ ಪರಿಣಿತ ತಂಡ ಶುಕ್ರವಾರ ಕೇರಳಕ್ಕೆ ತೆರಳುತ್ತಿದೆ. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ನ ನಿರ್ದೇಶಕರಾದ ಎಸ್.ಕೆ.ಸಿಂಗ್ ನೇತೃತ್ವದ 6 ಸದಸ್ಯರ ತಂಡವು ಇಂದು ತಲುಪಲಿದೆ.
ಹೆಚ್ಚಿನ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿರುವ ಜಿಲ್ಲೆಗಳಿಗೆ ಈ ತಂಡ ಭೇಟಿ ನೀಡಲಿದ್ದು, ಕೋವಿಡ್ ಹೆಚ್ಚಳಕ್ಕೆ ಕಾರಣ ಪತ್ತೆಗೆ ಮುಂದಾಗಲಿದೆ. ಜೊತೆಗೆ ಕೋವಿಡ್ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕಾರ್ಯತಂತ್ರ ರೂಪಿಸಲಿದೆ.