ಕರ್ನಾಟಕ

karnataka

ETV Bharat / bharat

ಲಖೀಮ್​ಪುರ ಹಿಂಸಾಚಾರ ಪ್ರಕರಣ: ಎಸ್​ಐಟಿ ತನಿಖೆಗೆ ಆದೇಶ - ಎಸ್​ಐಟಿ ತನಿಖೆ

ಉತ್ತರ ಪ್ರದೇಶದ ಲಖೀಮ್​ಪುರ ಹಿಂಸಾಚಾರ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರವು ಎಸ್​ಐಟಿಗೆ ವಹಿಸಿದೆ.

ಲಖೀಮ್​ಪುರ ಹಿಂಸಾಚಾರ ಪ್ರಕರಣ
ಲಖೀಮ್​ಪುರ ಹಿಂಸಾಚಾರ ಪ್ರಕರಣ

By

Published : Oct 6, 2021, 5:17 AM IST

ಲಕ್ನೋ: ಲಖೀಮ್​ಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿ ಯುಪಿ ಸಿಎಂ ಯೋಗಿ ಆದಿತ್ಯ ಸರ್ಕಾರ ಆದೇಶ ಹೊರಡಿಸಿದೆ.

ಲಖೀಮ್​ಪುರ ಗಲಭೆಯಲ್ಲಿ 9 ಜನ ಮೃತಪಟ್ಟ ಪ್ರಕರಣದ ತನಿಖೆಯನ್ನು ಎಸ್​ಐಟಿ ಕೈಗೊಳ್ಳಲಿದೆ. ಆರು ಸದಸ್ಯರ ಎಸ್​ಐಟಿ ತನಿಖಾ ತಂಡವನ್ನು ಹೆಚ್ಚುವರಿ ಎಸ್​ಪಿ ಅರುಣ್ ಕುಮಾರ ನೇತೃತ್ವ ವಹಿಸಲಿದ್ದು, ಡಿವೈಎಸ್​ಪಿ ಸಂದೀಪ್ ಸಿಂಗ್ ಹಾಗೂ ಮೂವರು ಇನ್ಸ್​ಪೆಕ್ಟರ್​ಗಳು ತಂಡದಲ್ಲಿ ಇರಲಿದ್ದಾರೆ.

ಭಾನುವಾರ ಲಖೀಮ್​ಪುರದಲ್ಲಿ ರೈತರ ಪ್ರತಿಭಟನೆ ವೇಳ ಹಿಂಸಾಚಾರ ಉಂಟಾಗಿ 9 ಜನ ಮೃತಪಟ್ಟಿದ್ದಾರೆ. ಇದು ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದೆ. ಪ್ರತಿಭಟನೆ ವೇಳೆ ರೈತರ ಮೇಲೆ ಕಾರು ಹರಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಲಖೀಮ್​ಪುರ ಪ್ರಕರಣ ದಿನದಿಂದ ದಿನಕ್ಕೆ ಹೊರ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ಇಳಿದಿದೆ. ಇನ್ನು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.

ABOUT THE AUTHOR

...view details