ಕರ್ನಾಟಕ

karnataka

ETV Bharat / bharat

ಒಳಜಗಳ: ಮಣಿಪುರದ 6 ಬಂಡುಕೋರರ ಹತ್ಯೆ, ಮೂವರಿಗೆ ಗಾಯ - ಮಣಿಪುರ ಮೂಲದ ಉಗ್ರ ಸಂಘಟನೆ

ಹಿಂಸಾಚಾರವನ್ನು ತ್ಯಜಿಸಲು ಮತ್ತು ಶರಣಾಗಲು ಒಂದು ಗುಂಪು ನಿರ್ಧರಿಸಿದ ಕಾರಣ ಘರ್ಷಣೆ ಉಂಟಾಯಿತು. ಇನ್ನು ಶರಣಾಗುವುದನ್ನು ವಿರೋಧಿಸುತ್ತಿರುವ ಇತರ ಗುಂಪು ಇವರ ಮೇಲೆ ದಾಳಿ ನಡೆಸಿ ಕೊಂದಿದೆ.

Six Manipur rebels killed three injured due to infighting
ಮಣಿಪುರದ 6 ಬಂಡುಕೋರರ ಹತ್ಯೆ, ಮೂವರಿಗೆ ಗಾಯ

By

Published : Aug 12, 2021, 8:35 PM IST

ಗುವಾಹಟಿ (ಅರುಣಾಚಲ ಪ್ರದೇಶ): ಮಣಿಪುರ ಮೂಲದ ಉಗ್ರ ಸಂಘಟನೆಯ ಕನಿಷ್ಠ ಆರು ಕಾರ್ಯಕರ್ತರನ್ನು ಕೊಲ್ಲಲಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಇತ್ತೀಚೆಗೆ ಇಂಡೋ ಮ್ಯಾನ್ಮಾರ್ ಗಡಿಯಲ್ಲಿ ನಡೆದ ಆಂತರಿಕ ಕಾಳಗದಲ್ಲಿ ಇದು ಜರುಗಿದೆ.

ಅರುಣಾಚಲದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, ಹಿಂಸಾಚಾರವನ್ನು ತ್ಯಜಿಸಲು ಮತ್ತು ಶರಣಾಗಲು ಒಂದು ಗುಂಪು ನಿರ್ಧರಿಸಿದ ಕಾರಣ ಘರ್ಷಣೆ ಉಂಟಾಯಿತು. ಇನ್ನು ಶರಣಾಗುವುದನ್ನು ವಿರೋಧಿಸುತ್ತಿರುವ ಇತರ ಗುಂಪು ಇವರ ಮೇಲೆ ದಾಳಿ ನಡೆಸಿ ಕೊಂದಿದೆ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸುಲಿಗೆ ಕಷ್ಟಕರವಾಗಿರುವುದರಿಂದ ಮ್ಯಾನ್ಮಾರ್‌ನಲ್ಲಿರುವ ಉಗ್ರಗಾಮಿ ಸಂಘಟನೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ ಎಂದು ಗುವಾಹಟಿಯ ರಕ್ಷಣಾ ಮೂಲವೊಂದು ಹೇಳಿದೆ. ಆರ್ಥಿಕ ಮುಗ್ಗಟ್ಟು ಹೊರತುಪಡಿಸಿ, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಬಿಕ್ಕಟ್ಟಿನಿಂದಾಗಿ ಹಾಗೂ ಉಡುಪಿನ ವಿಷಯಕ್ಕೂ ಸಿಬ್ಬಂದಿ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details