ದೆವರಿಯಾ(ಉತ್ತರ ಪ್ರದೇಶ): ಎಸ್‌ಯುವಿ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ದೆವರಿಯಾದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ. ಗೌರಿ ಬಜಾರ್-ರುದ್ರಾಪುರ ರಸ್ತೆಯ ಇಂದೂಪುರ ಕಾಳಿ ಮಂದಿರ ತಿರುವಿನ ಬಳಿ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಶುಭಂ ಗುಪ್ತಾ, ರಾಮ್ ಪ್ರಕಾಶ್ ಸಿಂಗ್, ವಶಿಷ್ಠ್ ಸಿಂಗ್, ಜೋಗನ್ ಸಿಂಗ್, ಅಂಕುರ್ ಪಾಂಡೆ, ದೇವದತ್ ಪಾಂಡೆ ಮತ್ತು ಬಸ್ ಸವಾರ ರಮಾನಂದ್ ಮೌರ್ಯ ಎಂದು ಗುರುತಿಸಲಾಗಿದೆ. ರಾತ್ರಿ 11.30ಕ್ಕೆ ಎಸ್‌ಯುವಿ ಕಾರಿನಲ್ಲಿದ್ದವರು ಸಮಾರಂಭವೊಂದನ್ನು ಮುಗಿಸಿಕೊಂಡು ರುದ್ರಾಪುರ ರಸ್ತೆಯ ಮೂಲಕ ಹಿಂದಿರುಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಬಸ್ ಎಸ್ಯುವಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀಪತಿ ಮಿಶ್ರಾ ಹೇಳಿದರು.