ಕರ್ನಾಟಕ

karnataka

ETV Bharat / bharat

ಉಗ್ರರೊಂದಿಗೆ ಸಂಪರ್ಕ: ಜಮ್ಮು-ಕಾಶ್ಮೀರದಲ್ಲಿ ಆರು ಸರ್ಕಾರಿ ನೌಕರರು ಸೇವೆಯಿಂದ ವಜಾ - ಭಯೋತ್ಪಾದಕರೊಂದಿಗೆ ಸಂಪರ್ಕ

ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಜೊತೆಗೆ ಅವರಿಗೆ ಆರ್ಥಿಕವಾಗಿ ಸಹಾಯ ಮಾಡ್ತಿದ್ದ ಆರು ಮಂದಿ ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

terror
terror

By

Published : Sep 22, 2021, 7:12 PM IST

ಶ್ರೀನಗರ(ಜಮ್ಮು-ಕಾಶ್ಮೀರ): ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಗಂಭೀರ ಆರೋಪದಡಿ ಜಮ್ಮು-ಕಾಶ್ಮೀರದ ಆರು ಮಂದಿ ಸರ್ಕಾರಿ ನೌಕರರನ್ನು ವಜಾಗೊಳಿಸಲಾಗಿದೆ. ದೇಶವಿರೋಧಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಲೆಪ್ಟಿನೆಂಟ್​ ಗವರ್ನರ್​​ ತಿಳಿಸಿದ್ದಾರೆ.

ಅಬ್ದುಲ್​ ಹಮೀದ್​ ವಾನಿ, ಜಾಫರ್​​ ಹುಸೇನ್​ ಭಟ್​, ಮೊಹಮ್ಮದ್​​ ರೈಫ್​ ಭಟ್​, ಲಿಯಾಖತ್​​ ಅಲಿ, ತಾರಿಖ್​​​ ಮೆಹಮೊದ್​​ ಹಾಗೂ ಸೊವಾಖತ್​​​ ಅಹ್ಮದ್​ ಖಾನ್​ ಸರ್ಕಾರಿ ಸೇವೆಯಿಂದ ವಜಾಗೊಂಡವರು. ಇದರಲ್ಲಿ ಇಬ್ಬರು ಪೊಲೀಸ್ ಕಾನ್ಸ್​​ಸ್ಟೇಬಲ್​, ಇಬ್ಬರು ಶಿಕ್ಷಕರು, ಅರಣ್ಯ ಇಲಾಖೆ ಅಧಿಕಾರಿ ಹಾಗೂ ರಸ್ತೆ ಮತ್ತು ಕಟ್ಟಡ ಇಲಾಖೆ ನೌಕರರು ಎಂದು ತಿಳಿದು ಬಂದಿದೆ.

ಲೆಫ್ಟಿನೆಂಟ್​​ ಗವರ್ನರ್​​​ ಮನೋಜ್​ ಸಿನ್ಹಾ ಈ ಕ್ರಮ ಕೈಗೊಂಡಿದ್ದು, ನೌಕರರ ವಜಾಕ್ಕೆ ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅರುಣ್​ ಕುಮಾರ್ ಮೆಹ್ತಾ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ಭಾರತೀಯ ಸಂವಿಧಾನದ ಆರ್ಟಿಕಲ್​​ 311(2)(C) ಅಡಿಯಲ್ಲಿ ಈ ನೌಕರರನ್ನು ವಜಾಗೊಳಿಸಲಾಗಿದೆ.

ಇದನ್ನೂ ಓದಿ:ಭಯೋತ್ಪಾದಕರಿಗೆ ಆರ್ಥಿಕ ನೆರವು: ಕಾಶ್ಮೀರದ 11 ಸರ್ಕಾರಿ ನೌಕರರ ವಜಾ

ಕಳೆದ ಜೂನ್ ತಿಂಗಳಲ್ಲೂ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಜಮ್ಮು-ಕಾಶ್ಮೀರದ 11 ಮಂದಿ ಸರ್ಕಾರಿ ನೌಕರರ ವಜಾಗೊಳಿಸಿ ಆದೇಶ ಹೊರಡಿಸಲಾಗಿತ್ತು.

ABOUT THE AUTHOR

...view details