ಸೀತಾಪುರ್ (ಉ.ಪ್ರ):ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆ ಸಾವು - ನೋವಿನ ಕುರಿತು ಸಹ ವರದಿಯಾಗುತ್ತಿದೆ. ಇದೀಗ ಕಳೆದ ರಾತ್ರಿ ವಿವಿಧೆಡೆ ಮನೆ ಗೋಡೆ ಕುಸಿದು ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ.
ಮಳೆಯ ಜೊತೆ ಗಾಳಿಯೂ ಇದ್ದು, ಬಿಸ್ವಾನ್, ಮನ್‌ಪುರ ಪೊಲೀಸ್ ಠಾಣೆ ಪ್ರದೇಶದ ಲಕ್ಷ್ಮಣಪುರ ಗ್ರಾಮದಲ್ಲಿ ಕಚ್ಚಾ ಮನೆ ಗೋಡೆ ಕುಸಿದಿವೆ. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಅಲ್ಲದೇ ಇಬ್ಬರು ಗಾಯಗೊಂಡಿದ್ದಾರೆ.