ಹೈದರಾಬಾದ್:ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಭಾರಿ ಬಹುಮತ ಪಡೆದಿದ್ದು ಐತಿಹಾಸಿಕ ಘಟನೆ. ಅತ್ಯಂತ ಬಲಿಷ್ಠ ಹಾಗೂ ತಂತ್ರಗಾರಿಕೆಯಿಂದ ಕೂಡಿದ ಬಿಜೆಪಿ ಚುನಾವಣಾ ಪ್ರಚಾರದ ಕಾರ್ಯತಂತ್ರವನ್ನೇ ಬುಡಮೇಲು ಮಾಡಿದ್ದು, ದೀದಿಯ ಸಾಧನೆ. ಇದರ ಜೊತೆಗೆ ಮಮತಾ ನಂದಿಗ್ರಾಮದಲ್ಲಿ ಗೆದ್ದಿದ್ದರೆ ಈ ಗೆಲುವು ಇನ್ನೂ ರೋಚಕವಾಗಿರುತ್ತಿತ್ತು. ಆದರೆ, ತನ್ನ ಒಂದು ಕಾಲದ ಶಿಷ್ಯ ಸುವೇಂದು ಅಧಿಕಾರಿ ಎದುರು ಮಮತಾ ಸೋತಿದ್ದು, ಭಾರತೀಯ ಚುನಾವಣಾ ಇತಿಹಾಸದ ರೋಚಕ ಸಂಗತಿಗಳಲ್ಲೊಂದು. ಆದರೆ, ಹೀಗೆ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯೊಬ್ಬರು ಸ್ವಕ್ಷೇತ್ರದಲ್ಲಿ ಚುನಾವಣೆ ಸೋಲುವುದು ಇದು ಪ್ರಥಮವೇನಲ್ಲ. ಇಂತಹ ಹಲವಾರು ಘಟನೆಗಳು ಹಿಂದೆ ಆಗಿ ಹೋಗಿವೆ.
ಅಧಿಕಾರದಲ್ಲಿದ್ದರೂ ಸ್ವಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಸೋತ ಕೆಲ ಪ್ರಮುಖ ರಾಜಕಾರಣಿಗಳ ಮಾಹಿತಿ ಇಲ್ಲಿದೆ:
2021: ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಎದುರು ಸೋಲುಂಡರು.
2019: ರಘುಬರ್ ದಾಸ್
ಬಿಜೆಪಿ ಮುಖಂಡ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ 2019 ರಲ್ಲಿ ಜಮಶೇಡಪುರ ಪಶ್ಚಿಮ ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಬಂಡಾಯ ಅಭ್ಯರ್ಥಿ ಸರಯೂ ರಾಯ್ ಎದುರು ಸೋತರು.
2018: ಲಾಲ್ ಥನ್ವಾಲಾ
ಮಿಜೋರಾಂ ಮುಖ್ಯಮಂತ್ರಿ ಲಾಲ್ ಥನ್ವಾಲಾ 2018ರಲ್ಲಿ ತಾವು ಸ್ಪರ್ಧಿಸಿದ್ದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದರು. ಸೆರ್ಚಿಪ್ ಕ್ಷೇತ್ರದಲ್ಲಿ ಜೋರಾಂ ಪೀಪಲ್ಸ್ ಮೂವಮೆಂಟ್ ಪಾರ್ಟಿಯ ಲಾಲ್ಡು ಹೋಮಾ ಮತ್ತು ಚಂಪಾಯ್ ದಕ್ಷಿಣ ಕ್ಷೇತ್ರದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷದ ಟಿ.ಜೆ. ಲಾಲನುಂಟ ಲುವಾಂಗ್ಲಾ ವಿರುದ್ಧ ಪರಾಜಿತರಾಗಿದ್ದರು.
2017: ಹರೀಶ ರಾವತ್