ಕರ್ನಾಟಕ

karnataka

Sitharaman slams Obama.. ನಿಮ್ಮ ಆಡಳಿತದಲ್ಲೇ 6 ಮುಸ್ಲಿಂ ರಾಷ್ಟ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿತ್ತು: ಒಬಾಮಾಗೆ ಸಚಿವೆ ನಿರ್ಮಲಾ ತಿರುಗೇಟು

By

Published : Jun 25, 2023, 9:53 PM IST

ಯುಎಸ್​ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತದಲ್ಲಿ ಆರು ಮುಸ್ಲಿಂ ರಾಷ್ಟ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ಮಾಡಿತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Sitharaman slams Obamas remarks, cites US bombing of Muslim countries when he was at helm
ನಿಮ್ಮ ಆಡಳಿತದಲ್ಲೇ 6 ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದ ಅಮೆರಿಕ: ಒಬಾಮಾಗೆ ಸಚಿವೆ ನಿರ್ಮಲಾ ತಿರುಗೇಟು

ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿಕೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಖಂಡಿಸಿದ್ದಾರೆ. ಆರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಒಬಾಮಾ ಅಧಿಕಾರಾವಧಿಯಲ್ಲಿ ಅಮೆರಿಕದ ಬಾಂಬ್ ಎದುರಿಸಿದ್ದವು. ಇದರಿಂದ ಅವರ ಹೇಳಿಕೆ ಆಶ್ಚರ್ಯಕರ ಮೂಡಿಸಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭಾನುವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 13 ದೇಶಗಳಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದರಲ್ಲಿ ಆರು ಮುಸ್ಲಿಂ ಜನಸಂಖ್ಯೆಯು ರಾಷ್ಟ್ರಗಳಿಂದ ಪ್ರದಾನವಾಗಿದೆ. ಮೋದಿ ನೇತೃತ್ವದ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲದ ಕಾರಣ ಪ್ರತಿಪಕ್ಷಗಳ ಆಜ್ಞೆಯ ಮೇರೆಗೆ ಅಲ್ಪಸಂಖ್ಯಾತರ ಕುರಿತು ಆಧಾರರಹಿತ ಆರೋಪಗಳನ್ನು ಮಾಡಲು ಸಂಘಟಿತ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:PM Modi in Egypt: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಪಿರಮಿಡ್‌ ವೀಕ್ಷಿಸಿದ ಪ್ರಧಾನಿ ಮೋದಿ - ವಿಡಿಯೋ

ಕಳೆದ ಗುರುವಾರ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬರಾಕ್ ಒಬಾಮಾ, ಭಾರತವು ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ, ಕೆಲವು ಹಂತದಲ್ಲಿ ದೇಶವು ವಿಭಜನೆಯಾಗುವ ಬಲವಾದ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ನಿರ್ಮಲಾ ಸೀತಾರಾಮನ್, 'ಪ್ರಧಾನಿ ಮೋದಿ ಅವರು ಎಲ್ಲರ ಮುಂದೆ ಭಾರತದ ಬಗ್ಗೆ ಮಾತನಾಡುವಾಗ ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ಭಾರತೀಯ ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿದ್ದು ನನಗೆ ಆಶ್ಚರ್ಯವಾಗಿದೆ ಎಂದರು.

ಅಲ್ಲದೇ, ಸಿರಿಯಾ, ಯೆಮೆನ್, ಸೌದಿ ಮತ್ತು ಇರಾಕ್ ಮತ್ತು ಇತರ ಮುಸ್ಲಿಂ ರಾಷ್ಟ್ರಗಳಲ್ಲಿ ಅವರ (ಬರಾಕ್ ಒಬಾಮಾ ಯುಎಸ್ ಅಧ್ಯಕ್ಷರಾಗಿ) ಅವಧಿಯಲ್ಲಿ ಆರು ದೇಶಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿಲ್ಲವೇ?. ಹೀಗಾಗಿ ಇಂತಹ ಆರೋಪಗಳನ್ನು ಮಾಡಿದಾಗ ಜನ ಅವರನ್ನು ನಂಬುತ್ತಾರೆಯೇ ಎಂದು ಪ್ರಶ್ನಿಸಿದರು.

ಇದೇ ವೇಳೆ, ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ಆರೋಪಗಳಿಗೆ ಪ್ರತಿಕ್ರಿಯಿಸಿ, "ನಾವು ಅಮೆರಿಕದ ಜೊತೆ ಉತ್ತಮ ಸ್ನೇಹವನ್ನು ಬಯಸುತ್ತೇವೆ. ಆದರೆ ಅಲ್ಲಿಂದ... ಭಾರತದಲ್ಲಿನ ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಹೇಳಿಕೆಗಳು ಬರುತ್ತವೆ. ಮಾಜಿ ಅಧ್ಯಕ್ಷರು ಸಹ ಏನನ್ನಾದರೂ ಹೇಳುತ್ತಿದ್ದಾರೆ. ಅವರ ಹಿಂದೆ ಯಾರಿದ್ದಾರೆ ಎಂಬುದೂ ಮುಖ್ಯ ಎಂದು ಕಿಡಿಕಾರಿದರು.

ಇದನ್ನೂ ಓದಿ:PM Modi in Egypt: ಈಜಿಪ್ಟ್‌ನ ಐತಿಹಾಸಿಕ ಅಲ್ - ಹಕೀಮ್ ಮಸೀದಿಗೆ ಪ್ರಧಾನಿ ಮೋದಿ ಭೇಟಿ

ಮುಂದುವರೆದು, ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯದ ಆರೋಪಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಪಕ್ಷವು ಇಂತಹ ಪ್ರಚಾರಗಳನ್ನು ನಡೆಸುತ್ತಿದೆ. ಕಳೆದ ಚುನಾವಣೆ ಮತ್ತು ಹಿಂದಿನ ಚುನಾವಣೆಗಳಲ್ಲಿ ಭಾರತದಲ್ಲಿ ಸರ್ಕಾರವನ್ನು ಬದಲಾಯಿಸಲು ಸಹಾಯ ಕೋರಿ ಪಾಕಿಸ್ತಾನಕ್ಕೆ ಹೋಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಯಾವುದೇ ಸಮಸ್ಯೆ ಎದುರಾದಾಗ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿರುವುದರಿಂದ ಅದನ್ನು ರಾಜ್ಯ ಮಟ್ಟದಲ್ಲಿ ತಿಳಿಸಲಾಗುತ್ತದೆ ಎಂದು ಹೇಳಿದರು.

ದೇಶದ ವಾತಾವರಣವನ್ನು ಹಾಳು ಮಾಡಲು ಈ ಉದ್ದೇಶಪೂರ್ವಕ ಪ್ರಯತ್ನ ನಡೆಸಲಾಗುತ್ತದೆ. ಏಕೆಂದರೆ ಪ್ರಧಾನಿ ಮೋದಿಯವರ ಅಭಿವೃದ್ಧಿ ನೀತಿಗಳ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎಂದು ಅವರು (ಕಾಂಗ್ರೆಸ್) ಭಾವಿಸುತ್ತಾರೆ. ವಿದೇಶದಲ್ಲಿ ಕಾರ್ಯನಿರ್ವಹಿಸುವ ತಮ್ಮ ಟೂಲ್ ಕಿಟ್‌ಗಳನ್ನು ನಿಯೋಜಿಸಿದ್ದಾರೆ. ವಿದೇಶಕ್ಕೆ ಹೋಗಿ ನಮ್ಮ ಪ್ರತಿಪಕ್ಷಗಳು ಭಾರತದ ಹಿತಾಸಕ್ತಿ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ:Barack Obama statement: 'ದೇಶ ವಿಭಜನೆ' ಹೇಳಿಕೆ ಕೊಟ್ಟ ಒಬಾಮಾಗೆ ತೀವ್ರ ಮುಖಭಂಗ.. ಸಿ-ವೋಟರ್​ನಲ್ಲಿ ಬಹಿರಂಗ

ABOUT THE AUTHOR

...view details