ಕರ್ನಾಟಕ

karnataka

ETV Bharat / bharat

ಮದುವೆ ಮುಗಿಸಿ ಹಿಂತಿರುಗುತ್ತಿದ್ದ ಬುಲೆಟ್​ಗೆ ಅಪರಿಚಿತ ವಾಹನ ಡಿಕ್ಕಿ; 3 ಜನ ಬೈಕ್​ ಸವಾರರು ಸಾವು - ತಕ್ಷಣ ಸಿಒ ಸಿಧೌಲಿ ಯಾದವೇಂದ್ರ ಯಾದವ್

ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ಸಿಧೌಲಿ ಕೊತ್ವಾಲಿ ಪ್ರದೇಶದಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ-ಬೈಕ್​ನಲ್ಲಿದ್ದ ಮೂರು ಜನ ಸವಾರರು ಸಾವು.

sitapur road accident three died
ಸೀತಾಪುರ ಜಿಲ್ಲೆಯಲ್ಲಿ ಬೈಕ್​ ಅಪಘಾತ ಮೂರು ಸಾವು

By

Published : Feb 13, 2023, 12:06 PM IST

ಸೀತಾಪುರ(ಉತ್ತರಪ್ರದೇಶ): ಜಿಲ್ಲೆಯ ಸಿಧೌಲಿ ಕೊತ್ವಾಲಿ ಪ್ರದೇಶದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ಬೈಕ್​ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು ಬೈಕನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಸಿಎಚ್‌ಸಿ ಸಿಧೌಲಿಗೆ ಕರೆದೊಯ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು, ಅಪಘಾತವೆಸಗಿದ ಮಾಹನದ ಬಗ್ಗೆ ಮಾಹಿತಿ ಇಲ್ಲದೆ ಇರುವುದರಿಂದ ಆ ವಾಹನವನ್ನು ಶೋಧಿಸಲಾಗುತ್ತಿದೆ ಎಂದು ಸಿಧೌಲಿ ಕೊತ್ವಾಲ್ ನ ಪೊಲೀಸ್​ ಅಧಿಕಾರಿ ಕೊತ್ವಾಲಿ ಪ್ರಭಾರಿ ಆರ್.ಕೆ. ಸಿಂಗ್ ತಿಳಿಸಿದ್ದಾರೆ.

ಮದುವೆ ಸಮಾರಂಭ ಮುಗಿಸಿ ಹಿಂತಿರುಗಿ ಬರುವಾಗ ಘಟನೆ; ಮೃತರಾದ, ಆನಂದ್ ಗುಪ್ತಾ ಅವರ ಮಗ ಅಜಯ್ ಕುಮಾರ್ ಗುಪ್ತಾ ಮತ್ತು ರಾಂಪುರ ಕಾಲಾ ನಿವಾಸಿ ಹನುಮಾನ್ ಪ್ರಸಾದ್ ಅವರ ಮಗ ದಯಾಳ್ ಮತ್ತು ಬಖ್ತಾವರಪುರ ನಿವಾಸಿ ಜಿತೇಂದ್ರ ಪಾಲ್ ಅವರ ಮಗ ಮಹೇಶ್ವರ್ ದಯಾಳ್ ಸೇರಿ ಮೂವರು ಸಿಧೌಲಿಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಹಾಜರಾಗಿದ್ದರು. ಮದುವೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಜಯಶ್ರೀ ಆಸ್ಪತ್ರೆ ಬಳಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಲೈವ್​ಲ್ಲಿ ನಡೀತು ಕಾರ್​ ಟ್ರಕ್​ನ ಆ್ಯಕ್ಷನ್​ ಸೀನ್​; ಕಾರಿಗೆ ಡಿಕ್ಕಿ ಹೊಡೆದು 3 ಕಿ.ಮೀ ಎಳೆದೊಯ್ದ ಟ್ರಕ್

ಸೀತಾಪುರದಲ್ಲಿ ನಡೆದ ಈ ಅಪಘಾತದ ಬಗ್ಗೆ ಸ್ಥಳೀಯರು ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಅಪಘಾತದಲ್ಲಿ ಸಾವನ್ನಪ್ಪಿದ ಮೂವರನ್ನು ಸಿಎಚ್‌ಸಿ ಸಿಧೌಲಿಗೆ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಪರಿಶೀಲಿಸಿದ ವೈದ್ಯರು, ಮೂವರು ಮೃತಪಟ್ಟಿರುವುದನ್ನು ದೃಢಪಡಿಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆಯ ಮಾಹಿತಿ ತಿಳಿದ ತಕ್ಷಣ ಸಿಒ ಸಿಧೌಲಿ ಯಾದವೇಂದ್ರ ಯಾದವ್, ಕೊತ್ವಾಲಿ ಪ್ರಭಾರಿ ಆರ್.ಕೆ.ಸಿಂಗ್, ಕಸ್ಬಾ ಚೌಕಿ ಉಸ್ತುವಾರಿ ಉಮೇಶ್ ಚೌರಾಸಿಯಾ, ಸಬ್ ಇನ್ಸ್‌ಪೆಕ್ಟರ್ ರಾಜೇಶ್ ರೈ, ಮಾಣಿಕ್​ರಾಮ್​ ವರ್ಮಾ, ಸಂಜೀವ್ ಸಿಂಗ್ ಸೇರಿದಂತೆ ಹೆಚ್ಚಿನ ಪೊಲೀಸ್ ಪಡೆ ಸಿಎಚ್‌ಸಿಗೆ ತಲುಪಿತ್ತು.

ಇನ್ನು, ಈ ಕುರಿತು ಪ್ರತಿಕ್ರಿಯಿಸಿದ ಸಿಧೌಲಿ ಕೊತ್ವಾಲ್ ಪೊಲೀಸ್​ ಅಧಿಕಾರಿ ಆರ್‌ಕೆ ಸಿಂಗ್, ಮೂವರು ಬುಲೆಟ್‌ನಲ್ಲಿ ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದಾಗ ಹಿಂದಿನಿಂದ ಟ್ರಕ್ ಅಥವಾ ಡಂಪರ್ ವಾಹನ ಅವರಿದ್ದ ಬುಲೆಟ್​ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ಸಿಎಸ್‌ಸಿ ಸಿಧೌಲಿಗೆ ಕರೆದೊಯ್ಯಲಾಯಿತು. ಇಲ್ಲಿ ಮೂವರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಇನ್ನು, ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ, ಅಪಘಾತ ನಡೆಸಿದ ಅಪರಿಚಿತ ವಾಹನಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಆಟೋ-ಮಿನಿ ಬಸ್ ನಡುವೆ ಭೀಕರ ಅಪಘಾತ: ಮೂವರು ಸಾವು, ಹಲವರಿಗೆ ಗಾಯ

ABOUT THE AUTHOR

...view details