ಕೋಲ್ಕತ್ತಾ : ಐಎಎಸ್ ಅಧಿಕಾರಿಯಂತೆ ನಟಿಸಿ ನಕಲಿ ಕೋವಿಡ್ ಲಸಿಕೆ ಶಿಬಿರ ನಡೆಸಿದ ಪ್ರಕರಣದ ಆರೋಪಿ ದೇಬಂಜನ್ ದೇಬ್ನ ಕಚೇರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ದಾಳಿ ನಡೆಸಿದೆ.
ಕೋಲ್ಕತ್ತಾ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಹಾಜರಾತಿ ಪುಸ್ತಕಗಳು, ಸಂದರ್ಶಕರ ಸ್ಲಿಪ್, ಉದ್ಯೋಗ ಅರ್ಜಿ, ನಕಲಿ ಟೆಂಡರ್ ದಾಖಲೆಗಳು ಸೇರಿದಂತೆ ಹಲವು ವಸ್ತುಗಳನ್ನು ದೇಬ್ ಕಚೇರಿಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ನಕಲಿ ಲಸಿಕೆ ಹರಗಣಕ್ಕೆ ಸಂಬಂಧಪಟ್ಟಂತೆ ದೇಬಂಜನ್ ದೇಬ್ ಆತನ ಸಹಾಯಕ ಇಂದ್ರಜಿತ್ ಶಾ, ಭದ್ರತಾ ಸಿಬ್ಬಂದಿ ಅರವಿಂದ ಬೈದ್ಯಾ ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶುಕ್ರವಾರ ಆರೋಪಿ ಶಾ'ನನ್ನು ಬಂಧಿಸಲಾಗಿದೆ. ಈತ ನಕಲಿ ಲಸಿಕೆ ಶಿಬಿರ ಏರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಮುಂದಿನ ಶುಕ್ರವಾರದ ವೇಳೆಗೆ ಪ್ರಕರಣದ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಓದಿ : Watch Video- ಕೆಚ್ಚೆದೆಯ ಅಂಗಡಿ ಮಾಲೀಕ.. ಫೈರಿಂಗ್ಗೆ ಬೆಚ್ಚಿ ಓಡಿಹೋದ Gangsters
ಪೊಲೀಸರು ಪ್ರಕಾರ, ಬಂಧಿತ ಆರೋಪಿಗಳು ನಗರದ ಸಿಟಿ ಕಾಲೇಜು ಮತ್ತು ಕಸಬಾದಲ್ಲಿ ಇದೇ ರೀತಿಯ ನಕಲಿ ಲಸಿಕಾ ಶಿಬಿರ ಆಯೋಜಿಸಿದ್ದರು. ಪ್ರಕರಣದ ತನಿಖೆ ನಡೆಸುವ ಸಲುವಾಗಿ ಜೂನ್ 25 ರಂದು ಎಸ್‌ಐಟಿ ತಂಡವನ್ನು ರಚಿಸಲಾಗಿದೆ. ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ದೂರು ದಾಖಲಿಸಿದ ಬಳಿಕ ಪೊಲೀಸರು ಪ್ರಮುಖ ಆರೋಪಿ ದೇಬ್ನನ್ನು ಬಂಧಿಸಿದ್ದರು.