ರಂಗಾರೆಡ್ಡಿ(ತೆಲಂಗಾಣ): ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಹೋದರಿಯರು ದುರ್ಮರಣಕ್ಕೀಡಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದ್ದು, ಒಬ್ಬಳು ಗಂಭೀರವಾಗಿ ಗಾಯಗೊಂಡಿದೆ. ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ನ ರೆಡ್ಡಿಪಲ್ಲಿ ಗ್ರಾಮದ ಶಿಕ್ಷಕ ಲಕ್ಷ್ಮಣ್ ಅವರ ಕಿರಿಯ ಮಗಳು ಪ್ರೇಮಿಕಾ ಹಾಗೂ ಅಕ್ಷಯಾ ಮೃತ ದುರ್ದೈವಿಗಳು. ಲಕ್ಷ್ಮಣ್ ಅವರ ಸಹೋದರ ಶ್ರೀನಿವಾಸ್ ಅವರ ಪುತ್ರಿ ಅಕ್ಷಯಾ ಜೊತೆಗೆ ಸೌಮ್ಯ ಹಾಗೂ ಪ್ರೇಮಿಕಾ ದ್ವಿಚಕ್ರ ವಾಹನದಲ್ಲಿ ಹೊರಗಡೆ ತೆರಳಿದ್ದರು.
ಈ ವೇಳೆ, ಚೇವೆಲ್ಲಾ ಕಡೆಯಿಂದ ಬಂದ ಕಾರು ಸ್ಕೂಟರ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರೇಮಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯ ಹಾಗೂ ಅಕ್ಷಯಾಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಕ್ಷಯಾ ಕೂಡ ಸಾವನ್ನಪ್ಪಿದ್ದಾಳೆ.