ಪೆದ್ದಪಲ್ಲಿ( ತೆಲಂಗಾಣ):ಪಟ್ಟಣದ ಪ್ರಗತಿನಗರ ನಿವಾಸಿ ಮಾರೋಜು ಶ್ವೇತಾ (24) ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಅಕ್ಕ ಸ್ವಾತಿ ತನ್ನ ತಂಗಿಯ ಸಾವಿನ ಬಗ್ಗೆ ಹೇಳಿಕೊಳ್ಳದೇ ನಾಲ್ಕು ದಿನಗಳಿಂದ ಒಂದೇ ಮನೆಯಲ್ಲಿ ವಾಸವಾಗಿದ್ದ ಘಟನೆ ಬೆಳಕಿಗೆ ಬಂದಿದೆ.
ಶ್ವೇತಾ ಮತ್ತು ಆಕೆಯ ಅಕ್ಕ ಸ್ವಾತಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಶ್ವೇತಾ ಎಂಬಿಎ ಮುಗಿಸಿದ್ದು, ಎಂಟೆಕ್ ವ್ಯಾಸಂಗ ಪೂರ್ಣಗೊಳಿಸಿರುವ ಸ್ವಾತಿ ಪಟ್ಟಣದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದೆ ಶ್ವೇತ ಮೃತಪಟ್ಟಾಗ, ಸಂಬಂಧಿಕರು ಮತ್ತು ಬಂಧುಗಳು ಇಲ್ಲದ ಕಾರಣ ಯಾರಿಗೆ ಹೇಳಬೇಕೆಂದು ತಿಳಿಯದೇ ಸಹೋದರಿಯ ಶವದ ಪಕ್ಕದಲ್ಲಿ ನಾಲ್ಕು ದಿನಗಳನ್ನು ಕಳೆದಿದ್ದಾರೆ.
ಓದಿ:INS ರಣವೀರ್ನಲ್ಲಿ ಸ್ಫೋಟ: ನೌಕಾಸೇನೆಯ ಮೂವರು ಸಿಬ್ಬಂದಿ ಸಾವು, 11 ಮಂದಿಗೆ ಗಾಯ
ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ನಗರದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ವಾತಿಯನ್ನು ವಿಚಾರಣೆ ನಡೆಸಿದ್ದು, ತಂಗಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ಕೊಳೆತ ದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು.
ಸಹೋದರಿಯರ ತಾಯಿ ಮತ್ತು ತಂದೆ ಈ ಹಿಂದೆಯೇ ಮೃತಪಟ್ಟಿದ್ದರು. ಈ ಹಿಂದೆ ಇಬ್ಬರು ಅಜ್ಜಿಯಂದಿರು ಮೃತಪಟ್ಟಾಗ ಸಹ ಸಹೋದರಿಯರು ಎರಡು ಮೂರು ದಿನ ಯಾರಿಗೂ ಹೇಳಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.