ಕರ್ನಾಟಕ

karnataka

ETV Bharat / bharat

ದೆಹಲಿ ಮದ್ಯ ಹಗರಣ: ಸಿಸೋಡಿಯಾಗೆ ಮೇ 23ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್.. - ದೆಹಲಿ ಪೊಲೀಸರು

ದೆಹಲಿ ಮದ್ಯ ಹಗರಣದ ಇಡಿ ಪ್ರಕರಣ ಸಂಬಂಧಿಸಿದಂತೆ ಕೋರ್ಟ್, ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾಗೆ ಸೋಮವಾರ ಮತ್ತೊಮ್ಮೆ ನ್ಯಾಯಾಂಗ ಬಂಧನದ ಅವಧಿಯನ್ನು ಮೇ 23ರವರೆಗೆ ವಿಸ್ತರಣೆ ಮಾಡಿದೆ.

Manish sisodiya
ಮನೀಶ್ ಸಿಸೋಡಿಯಾ

By

Published : May 8, 2023, 8:23 PM IST

ನವದೆಹಲಿ:ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ರೋಸ್ ಅವೆನ್ಯೂ ನ್ಯಾಯಾಲಯದಿಂದ ಪರಿಹಾರ ದೊರೆತಿಲ್ಲ. ನ್ಯಾಯಾಲಯ ಸೋಮವಾರ ಸಿಸೋಡಿಯಾಗೆ ನ್ಯಾಯಾಂಗ ಬಂಧನವನ್ನು ಮೇ 23ರವರೆಗೆ ವಿಸ್ತರಿಸಿದೆ. ವಿಶೇಷ ಸಿಬಿಐ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶ ಹೊರಡಿಸಿದರು.

ಇದನ್ನೂ ಓದಿ:ಪ್ರಯಾಣಿಕನನ್ನು ಖಾಸಗಿ ಬಸ್​ನಿಂದ ಹೊರಗೆ ತಳ್ಳಿದ ಚಾಲಕ, ಕ್ಲೀನರ್ ಅರೆಸ್ಟ್

ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯ ಬಿಗಿ ಭದ್ರತೆಯ ನಡುವೆ ಸಿಸೋಡಿಯಾ ನ್ಯಾಯಾಲಯವನ್ನು ತಲುಪಿದರು. ಮಧ್ಯಾಹ್ನ 2.20ರ ಸುಮಾರಿಗೆ ನ್ಯಾಯಾಧೀಶರು ನ್ಯಾಯಾಲಯದ ಕಲಾಪವನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸಿಸೋಡಿಯಾ ಅವರು, ತಮ್ಮ ವಕೀಲರೊಂದಿಗೆ 10 ನಿಮಿಷಗಳ ಕಾಲ ನ್ಯಾಯಾಲಯದ ಕೊಠಡಿಯೊಳಗೆ ಬಂದರು. ಆಗ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಸಿಸೋಡಿಯಾ ಮಾತನಾಡಿ, ತಮ್ಮ ಪತ್ನಿಯ ಅನಾರೋಗ್ಯವನ್ನು ಉಲ್ಲೇಖಿಸಿದರು. ಇಡಿ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಇಡಿಯಿಂದ ಪ್ರತಿಕ್ರಿಯೆಯನ್ನು ಕೇಳಿದೆ.

ಇದನ್ನೂ ಓದಿ:19 ಜನ ಮಾದಕ‌ ದಂಧೆಕೋರರ ಬಂಧನ : 7 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ

ಮೂವರು ಆರೋಪಿಗಳಿಗೆ ಜಾಮೀನು?:ಇದಕ್ಕೂ ಮುನ್ನ ಬೆಳಿಗ್ಗೆ ಹೈಕೋರ್ಟ್ ಅಬಕಾರಿ ಹಗರಣದ ಮತ್ತೊಬ್ಬ ಆರೋಪಿ ಶರತ್ ಚಂದ್ರ ರೆಡ್ಡಿಗೆ ಸಾಮಾನ್ಯ ಜಾಮೀನು ಮಂಜೂರು ಮಾಡಿತ್ತು. ಮತ್ತೊಂದೆಡೆ, ಅಬಕಾರಿ ಹಗರಣದ ಇತರ ಇಬ್ಬರು ಆರೋಪಿಗಳಾದ ಗೌತಮ್ ಮಲ್ಹೋತ್ರಾ ಮತ್ತು ರಾಜೇಶ್ ಜೋಶಿ ಅವರಿಗೂ ಶನಿವಾರ ರೋಸ್ ಅವೆನ್ಯೂ ನ್ಯಾಯಾಲಯವು ಜಾಮೀನು ನೀಡಿದೆ. ಸಿಬಿಐ ಪ್ರಕರಣದಲ್ಲಿ ಸಿಸೋಡಿಯಾ ಮೇ 12ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ನ್ಯಾಯಾಲಯದ ಕೊಠಡಿಯಿಂದ ಹೊರಬಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಸೋಡಿಯಾ ಅವರು, ''ಭಾರತೀಯ ಜನತಾ ಪಕ್ಷ (ಬಿಜೆಪಿ) ಎಷ್ಟೇ ಪ್ರಯತ್ನಿಸಿದರೂ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ. ಪತ್ಪರಗಂಜ್ ಅಥವಾ ದೆಹಲಿಯ ಕೆಲಸಗಳು ನಿಲ್ಲುವುದಿಲ್ಲ. ಬಿಜೆಪಿಯವರು ಎಷ್ಟೇ ಪ್ರಯತ್ನಿಸಿದರೂ ದೆಹಲಿಯ ಯಾವುದೇ ಕೆಲಸ ನಿಲ್ಲುವುದಿಲ್ಲ" ಎಂದು ಹೇಳಿದರು.

ಇದನ್ನೂ ಓದಿ:ಕೇರಳ ಘಟನೆ ಬೆನ್ನಲ್ಲೇ ಮತ್ತೊಂದು ದುರಂತ.. ಸಟ್ಲೆಜ್​ ನದಿಯಲ್ಲಿ ದೋಣಿ ಮಗುಚಿ ಇಬ್ಬರು ಸಾವು

ಇದನ್ನೂ ಓದಿ:WFI ಮುಖ್ಯಸ್ಥನ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಗೆ ರೈತರ ಬೆಂಬಲ

ABOUT THE AUTHOR

...view details