ನವದೆಹಲಿ:ಸರ್ ಗಂಗಾ ರಾಮ್ ಆಸ್ಪತ್ರೆ (ಎಸ್‌ಜಿಆರ್‌ಹೆಚ್) ಗೆ ಮಂಗಳವಾರ ಬೆಳಗ್ಗೆ ಎರಡು ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಸರಬರಾಜು ಮಾಡಲಾಗಿದ್ದು, ಸದ್ಯ ಆಸ್ಪತ್ರೆಯ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ಹೆಚ್ಚುವರಿಯಾಗಿ 6,000 ಕ್ಯೂಬಿಕ್ ಮೀಟರ್ ಆಮ್ಲಜನಕವನ್ನು ಹೊಂದಿದ್ದು, ಇದು ಸುಮಾರು 10 ಗಂಟೆಗಳವರೆಗೆ ಅಥವಾ ಸಂಜೆ 6 ಗಂಟೆಯವರೆಗೆ ಬರಲಿದೆ.
ಈ ಆಸ್ಪತ್ರೆಯಲ್ಲಿ ದಿನಕ್ಕೆ 10,000 ಕ್ಯೂಬಿಕ್ ಮೀಟರ್ ಆಕ್ಸಿಜನ್ ಅವಶ್ಯಕತೆ ಇದೆ. 2 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಇನಾಕ್ಸ್ ಏರ್ ಪ್ರಾಡಕ್ಟ್‌ಗಳಿಂದ ಏಪ್ರಿಲ್ 27, 2021 ರಂದು ಬೆಳಗ್ಗೆ 6 ಗಂಟೆಗೆ ಸ್ವೀಕರಿಸಲಾಗಿದೆ. ನಮ್ಮ ಆಸ್ಪತ್ರೆಯ ಆಕ್ಸಿಜನ್ ಶೇಖರಣಾ ಟ್ಯಾಂಕ್‌ಗಳಲ್ಲಿ ಸದ್ಯ 6000 ಘನ ಮೀಟರ್ ಆಮ್ಲಜನಕ ಲಭ್ಯವಿದೆ, ಅದು 10 ಗಂಟೆ ಅಥವಾ ಸಂಜೆ 6 ಗಂಟೆವರೆಗೆ ಇರುತ್ತದೆ ಎಂದು ಗಂಗಾ ರಾಮ್ ಆಸ್ಪತ್ರೆಯ ಮಾಧ್ಯಮ ವಿಭಾಗ ಹೇಳಿದೆ.