ಹೈದರಾಬಾದ್:ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಂದು ಮಧ್ಯಾಹ್ನ ಗಂಡು ಮಗುವಿಗೆ ಶ್ರೇಯಾ ಜನ್ಮ ನೀಡಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಸಂತಸದ ಸುದ್ದಿಯನ್ನ ಗಾಯಕಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದೇವರ ಆಶೀರ್ವಾದದಿಂದ ಇಂದು ಮಧ್ಯಾಹ್ನ ಗಂಡು ಮಗು ಜನಿಸಿದೆ ಎಂದು ತಿಳಿಸಿದ್ದಾರೆ.
'ದೇವರ ಆಶೀರ್ವಾದದಿಂದ ಇಂದು ಮಧ್ಯಾಹ್ನ ಗಂಡು ಮಗು ಜನಿಸಿದೆ. ಇಂತಹ ಸಂತಸದ ಕ್ಷಣವನ್ನು ಹಿಂದೆಂದೂ ಅನುಭವಿಸಿರಲಿಲ್ಲ. ಪತಿ ಶಿಲಾದಿತ್ಯ, ನಾನು ಮತ್ತು ಇಡೀ ಕುಟುಂಬ ಹರ್ಷಚಿತ್ತರಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಕಾಳಜಿಗೆ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.
ಅಮ್ಮನಾದ ಖುಷಿಯಲ್ಲಿ ಗಾಯಕಿ ಶ್ರೇಯಾ ಘೋಷಾಲ್
ಈ ಸುದ್ದಿಯನ್ನ ಅವರು ಶೇರ್ ಮಾಡಿಕೊಳ್ಳುತ್ತಿದ್ದಂತೆ ಅನೇಕ ನಟ-ನಟಿಯರು ಖ್ಯಾತ ಗಾಯಕಿಗೆ ವಿಶ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಸುಮಧುರ ಕಂಠದ ಮೂಲಕ ಸಂಗೀತಾಭಿಮಾನಿಗಳ ಹೃದಯ ಕದ್ದ ಗಾಯಕಿ ಶ್ರೇಯಾ ಘೋಷಾಲ್ ಅಮ್ಮನಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಬೇಬಿ ಬಂಪ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.