ಕರ್ನಾಟಕ

karnataka

ETV Bharat / bharat

ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ: ಗಾಯಕ ಸಮರ್ ಸಿಂಗ್ ಬಂಧನ - ನೋಯ್ಡಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣದಲ್ಲಿ ಗಾಯಕ ಸಮರ್ ಸಿಂಗ್​ರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ.

akanksha dubey suicide case  bhojpuri actress akanksha dubey  Accused arrested in Akanksha Dubey suicide case  Ghaziabad police  etv bharat delhi  singer Samar Singh arrested  ಗಾಯಕ ಸಮರ್ ಸಿಂಗ್ ಬಂಧನ  ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ  ಪ್ರಕರಣದ ತನಿಖೆ ಚುರುಕು  ಆರೋಪಿ ವಿರುದ್ಧ ಲುಕೌಟ್ ನೋಟಿಸ್ ಜಾರಿ  ನೋಯ್ಡಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ  ಸಿಬಿಐ ಅಥವಾ ಸಿಬಿ ಸಿಐಡಿಯಿಂದ ತನಿಖೆಗೆ ಒತ್ತಾಯ
ಗಾಯಕ ಸಮರ್ ಸಿಂಗ್ ಬಂಧನ

By

Published : Apr 7, 2023, 10:56 AM IST

ನವದೆಹಲಿ:ಘಾಜಿಯಾಬಾದ್ ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಗಾಜಿಯಾಬಾದ್‌ನಿಂದ ಬಂಧಿಸಲಾಗಿದೆ. ಮೂಲಗಳ ಪ್ರಕಾರ, ಸಮರ್ ಸಿಂಗ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿ ಸಮರ್ ಸಿಂಗ್ ಗಾಯಕವಾಗಿರುವುದು ಗಮನಾರ್ಹ.

ಆರೋಪಿ ವಿರುದ್ಧ ಲುಕೌಟ್ ನೋಟಿಸ್ ಜಾರಿ:ಆರೋಪಿ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಪೊಲೀಸರು ಎಲ್ಲೆಡೆ ಶೋಧ ನಡೆಸಿದರೂ ಯಾವುದೇ ಪ್ರಯೋಜನಗಳ ಆಗಿರಲಿಲ್ಲ. ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಗಾಜಿಯಾಬಾದ್‌ನಲ್ಲಿ ತಲೆಮರಿಸಿಕೊಂಡಿರುವುದು ತಿಳಿದಿತ್ತು. ಕೂಡಲೇ ಪೊಲೀಸರು ನಂದಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್ ನಗರ ವಿಸ್ತರಣೆ ಪ್ರದೇಶಕ್ಕೆ ತೆರಳಿ ಗಾಯಕಿ ಮತ್ತು ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಮರ್ ಸಿಂಗ್‌ನನ್ನು ಬಂಧಿಸಿದರು.

ನೋಯ್ಡಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ:ಡಿಸಿಪಿ ನಿಪುನ್ ಅಗರ್ವಾಲ್ ಪ್ರಕಾರ, ವಾರಾಣಸಿ ಪೊಲೀಸರು ಗುರುವಾರ ಗಾಜಿಯಾಬಾದ್​ಗೆ ತೆರಳಿದ್ದರು. ನಮ್ಮ ಪೊಲೀಸರಿಗೆ ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣದಲ್ಲಿ ಸಹಾಯ ಕೋರಿದರು. ಆರೋಪಿ ಕೆಲ ದಿನಗಳ ಹಿಂದೆ ನೋಯ್ಡಾದಲ್ಲಿ ವಾಸವಿದ್ದು, 4 ದಿನಗಳ ಹಿಂದೆ ಗಾಜಿಯಾಬಾದ್​ಗೆ ಬಂದು ನೆಲಸಿದ್ದನು. ಬಳಿಕ ಆರೋಪಿಯನ್ನು ಬಂಧಿಸಲಾಗಿದ್ದು, ಎಲ್ಲ ವಿಧಿವಿಧಾನಗಳನ್ನು ಮುಗಿಸಿದ ಬಳಿಕ ಪೊಲೀಸರು ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಾರಾಣಸಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು. ಆ ನಂತರವೇ ನಟಿ ಆತ್ಮಹತ್ಯೆಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದುಬರಲಿದೆ.

ಏನಿದು ಪ್ರಕರಣ?:ಮಾರ್ಚ್ 25 ರಂದು ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಅವರ ಮೃತ ದೇಹವು ವಾರಾಣಸಿಯ ಸಾರನಾಥ್ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೋಟೆಲ್​ನವರು ಮಾಸ್ಟರ್ ಕೀಯಿಂದ ಹೋಟೆಲ್ ರೂಂ ತೆರೆದು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಆದರೆ, ಎರಡು ದಿನಗಳ ನಂತರ ಈ ವಿಚಾರದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಆಕಾಂಕ್ಷಾ ದುಬೆ ಅವರ ತಾಯಿ ಮಧು ದುಬೆ ಅವರು ಭೋಜ್‌ಪುರಿ ಗಾಯಕ ಸಮರ್ ಸಿಂಗ್ ಮತ್ತು ಆತನ ಸಹೋದರ ಸಂಜಯ್ ಸಿಂಗ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿದ್ದಾರೆ. ಮತ್ತು ಅವರಿಬ್ಬರು ನನ್ನ ಮಗಳನ್ನು ಕೊಂದಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಸಿಬಿಐ ಅಥವಾ ಸಿಬಿ-ಸಿಐಡಿಯಿಂದ ತನಿಖೆಗೆ ಒತ್ತಾಯ:ಈ ಹಿಂದೆನಟಿಯ ತಾಯಿ ಮಧು ದುಬೆ ಪರವಾಗಿ ವಕೀಲ ಶಶಕ್ ಶೇಖರ್ ತ್ರಿಪಾಠಿ ಧ್ವನಿ ಎತ್ತಿದ್ದಾರೆ. ನಟಿ ಶವದ ಮರಣೋತ್ತರ ಪರೀಕ್ಷೆಯ ವರದಿ ಮತ್ತು ವೈದ್ಯಕೀಯ ತಜ್ಞರ ಸಲಹೆ ಪಡೆಯಲಾಗುವುದು. ಹಾಗೂ ಅದರ ಆಧಾರದ ಮೇಲೆ ಪೊಲೀಸರನ್ನು ಪ್ರಶ್ನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಸಿಬಿಐ ಅಥವಾ ಸಿಬಿ - ಸಿಐಡಿಯಿಂದ ಈ ಪ್ರಕರಣದ ತನಿಖೆ ನಡೆಸುವಂತೆ ತ್ರಿಪಾಠಿ ಅವರು ಬುಧವಾರ ಒತ್ತಾಯಿಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವ ಅವರು, 25 ವರ್ಷದ ನಟಿಯ ಸಾವು ಆತ್ಮಹತ್ಯೆಯಲ್ಲ. ಬದಲಿಗೆ ಹೋಟೆಲ್ ಕೋಣೆಯಲ್ಲಿ ಕೆಲವರು ಅವಳನ್ನು ಹತ್ಯೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ಪತ್ರದ ಬಳಿಕ ಪೊಲೀಸರು ಈ ತನಿಖೆಯನ್ನು ಚುರುಕುಗೊಳಿಸಿದರು. ಆರೋಪಿ ಸಮರ್ ಸಿಂಗ್ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಮುಂಬೈ, ಅಜಂಗಢ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ಈಗ ಆರೋಪಿ ಸಮರ್​ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ:ಆತ್ಮಹತ್ಯೆಗೂ ಮುನ್ನ ಇನ್​ಸ್ಟಾ ಲೈವ್​​ನಲ್ಲಿ ಕಣ್ಣೀರಿಟ್ಟಿದ್ದ ನಟಿ ಆಕಾಂಕ್ಷಾ ದುಬೆ

ABOUT THE AUTHOR

...view details