ಕರ್ನಾಟಕ

karnataka

ETV Bharat / bharat

ಉತ್ತರಾಖಂಡದಲ್ಲಿ ದೊಡ್ಡ ಭೂಕಂಪನವಾಗಲಿದೆಯಂತೆ: ಸಿಂಗಾಪುರದ ಭೂವಿಜ್ಞಾನಿಗಳ ಎಚ್ಚರಿಕೆ - ಈಟಿವಿ ಭಾರತ ಕನ್ನಡ

ಕೇಂದ್ರ ಭೂಕಂಪನ ಅಂತರ ಎಂದು ಕರೆಯಲ್ಪಡುವ ಉತ್ತರಾಖಂಡದಲ್ಲಿ ದೊಡ್ಡ ಭೂಕಂಪ ಸಂಭವಿಸಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರಾಖಂಡದಲ್ಲಿ ದೊಡ್ಡ ಭೂಕಂಪನವಾಗಲಿದೆಯಂತೆ:
ಉತ್ತರಾಖಂಡದಲ್ಲಿ ದೊಡ್ಡ ಭೂಕಂಪನವಾಗಲಿದೆಯಂತೆ:

By

Published : Jul 28, 2022, 9:17 PM IST

Updated : Jul 28, 2022, 9:27 PM IST

ಡೆಹ್ರಾಡೂನ್:ಉತ್ತರಾಖಂಡದ ವಿವಿಧ ಪ್ರದೇಶಗಳಲ್ಲಿ ಭೂಕಂಪನದ ಸಣ್ಣ ಕಂಪನಗಳು ಈಗ ದೊಡ್ಡ ವಿಷಯವಾಗಿ ಮಾರ್ಪಟ್ಟಿದೆ. ಭೂಕಂಪಗಳಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಉತ್ತರಾಖಂಡದ ಕಾಳಜಿಯನ್ನು ಹೆಚ್ಚಿಸಿವೆ. ಉತ್ತರಾಖಂಡದಲ್ಲಿ ರಿಕ್ಟರ್ ಮಾಪಕದಲ್ಲಿ 8ಕ್ಕಿಂತ ಹೆಚ್ಚು ತೀವ್ರತೆಯ ಕಂಪನದ ಭೂಕಂಪ ಸಂಭವಿಸಬಹುದು ಎಂದು ವಿಜ್ಞಾನಿಗಳು ಹೇಳಿರುವುದು ಇಲ್ಲಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.

ಕೇಂದ್ರ ಭೂಕಂಪನ ಅಂತರ ಎಂದು ಕರೆಯಲ್ಪಡುವ ಉತ್ತರಾಖಂಡದಲ್ಲಿ ದೊಡ್ಡ ಭೂಕಂಪ ಸಂಭವಿಸಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹಿಮಾಲಯದ ಈ ಭಾಗದಲ್ಲಿ ಬಹಳ ದಿನಗಳಿಂದ ಯಾವುದೇ ದೊಡ್ಡ ಭೂಕಂಪ ಸಂಭವಿಸಿಲ್ಲ. ಈ ಕಾರಣದಿಂದಾಗಿ, ವಾಯುವ್ಯ ಹಿಮಾಲಯ ಪ್ರದೇಶದಲ್ಲಿ ಭೂಮಿಯಲ್ಲಿ ಸಂಗ್ರಹವಾಗಿರುವ ಭೂಕಂಪನ ಶಕ್ತಿಯ ಶೇಕಡಾ 3 ರಿಂದ 5 ರಷ್ಟು ಬಿಡುಗಡೆಯಾಗುತ್ತದೆ. ಇದೇ ಕಾರಣಕ್ಕೆ ಭೂಕಂಪ ಸಂಭವಿಸಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರಾಖಂಡದಲ್ಲಿ ದೊಡ್ಡ ಭೂಕಂಪನವಾಗಲಿದೆಯಂತೆ

ಗಂಭೀರ ಎಚ್ಚರಿಕೆ: ಹಿಮಾಲಯ ಪ್ರದೇಶದಲ್ಲಿ ಬಹಳ ಸಮಯದಿಂದ ಸಣ್ಣ ಭೂಕಂಪಗಳು ಸಂಭವಿಸುತ್ತಿವೆ. ಆದರೆ, ದೊಡ್ಡ ಭೂಕಂಪಗಳು ಸಂಭವಿಸಿಲ್ಲ. 1905 ರಲ್ಲಿ ಹಿಮಾಚಲದ ಕಂಗ್ರಾದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ತಿಳಿಯುವುದಾದರೆ ಆ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ ಆಗಿತ್ತು.

ಅದೇ ಸಮಯದಲ್ಲಿ ನೇಪಾಳದಲ್ಲಿ ಭೂಕಂಪದ ನಂತರ ವಾಯುವ್ಯ ಹಿಮಾಲಯ ಪ್ರದೇಶದಲ್ಲಿ ಯಾವುದೇ ದೊಡ್ಡ ಭೂಕಂಪ ಸಂಭವಿಸಿರಲಿಲ್ಲ. ಈಗ ವಿಜ್ಞಾನಿಗಳು ಖಂಡಿತವಾಗಿಯೂ ಈ ಪ್ರದೇಶದಲ್ಲಿ ಅಂದರೆ ಉತ್ತರಾಖಂಡ ಪ್ರದೇಶದಲ್ಲಿ ದೊಡ್ಡ ಭೂಕಂಪ ಸಂಭವಿಸಬಹುದು ಎಂದು ಹೇಳುತ್ತಿದ್ದಾರೆ. ಆದರೆ, ಅದು ಯಾವಾಗ ಆಗುತ್ತದೆ ಎಂಬುದು ಖಚಿತವಾಗಿಲ್ಲ.

ಏಷ್ಯನ್ ಸಿಸ್ಮಲಾಜಿಕಲ್ ಕಮಿಷನ್ ಸಿಂಗಾಪುರದ ನಿರ್ದೇಶಕ ಪರಮೇಶ್ ಬ್ಯಾನರ್ಜಿ ಪ್ರತಿಕ್ರಿಯಿಸಿ, ಈ ಪ್ರದೇಶವು ದೀರ್ಘಕಾಲದವರೆಗೆ ಭೂಕಂಪವನ್ನು ಅನುಭವಿಸಿಲ್ಲ. ಆದರೆ, ಈಗ ಖಂಡಿತಾ ಅಲ್ಲಿ ಭೂಕಂಪನ ಆಗುತ್ತದೆ ಎಂದು ಹೇಳಿದ್ದಾರೆ.

ರಿಕ್ಟರ್ ಮಾಪಕ 6 ರ ತೀವ್ರತೆಯ ಭೂಕಂಪನಕ್ಕಿಂತ ದೊಡ್ಡ ಭೂಕಂಪಗಳು ಸಂಭವಿಸಿವೆ: ಉತ್ತರಾಖಂಡದಲ್ಲಿ 1991 ರಲ್ಲಿ ಉತ್ತರಕಾಶಿಯಲ್ಲಿ 7.0 ಮತ್ತು 1999 ರಲ್ಲಿ ಚಮೋಲಿಯಲ್ಲಿ 6.8 ತೀವ್ರತೆಯ ಕಂಪನ ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ. ಆದರೆ, ಅಂದಿನಿಂದ ಯಾವುದೇ ದೊಡ್ಡ ಭೂಕಂಪ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಜಿಪಿಎಸ್ ವ್ಯವಸ್ಥೆಯ ಅವಶ್ಯಕತೆ ಇದೆ:ಡಾ.ಪರಮೇಶ್ ಬ್ಯಾನರ್ಜಿ ಈ ಬಗ್ಗೆ ಮಾತನಾಡಿ, ಜಪಾನ್ ಮತ್ತು ಚೀನಾದಲ್ಲಿ ಹೆಚ್ಚಿನ ಭೂಕಂಪಗಳು ಸಂಭವಿಸುತ್ತವೆ. ಆದರೆ, ಅಲ್ಲಿ ನಿರಂತರ ಸಂಶೋಧನೆ ನಡೆಯುತ್ತಿದೆ. ದೊಡ್ಡ ವಿಷಯವೆಂದರೆ ಜಪಾನ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜಿಪಿಎಸ್ ಸಿಸ್ಟಮ್‌ಗಳನ್ನು ಸ್ಥಾಪಿಸಲಾಗಿದೆ.

ಆದರೆ, ನಾವು ಭಾರತದ ಬಗ್ಗೆ ಮಾತನಾಡಿದರೆ ಹೆಚ್ಚು ಭೂಕಂಪನದ ಅನುಭವವಾಗುವ ಹಿಮಾಲಯ ಪ್ರದೇಶದಲ್ಲಿ ಅಂತಹ ವ್ಯವಸ್ಥೆಗಳಿಲ್ಲ. ಆದರೆ, ಮುಂಬರುವ ಸಮಯಕ್ಕೆ ಇದು ಅಗತ್ಯವಿದೆ. ಆದ್ದರಿಂದ ವಿಜ್ಞಾನಿಗಳು ಈ ಸಂಪೂರ್ಣ ಹಿಮಾಲಯ ಪ್ರದೇಶದಲ್ಲಿ ಭೂವೈಜ್ಞಾನಿಕ ಚಲನೆಯನ್ನು ಕಂಡು ಹಿಡಿಯಬಹುದು ಎಂದಿದ್ದಾರೆ.

ಉತ್ತರಾಖಂಡ ಅಥವಾ ವಾಯುವ್ಯ ಹಿಮಾಲಯ ಪ್ರದೇಶದಲ್ಲಿ ಇನ್ನೂ 8 ರಿಕ್ಟರ್ ಮಾಪಕಕ್ಕಿಂತ ಹೆಚ್ಚಿನ ಭೂಕಂಪ ಸಂಭವಿಸಿಲ್ಲ ಎಂದು ಪರಿಸರವಾದಿ ಮತ್ತು ಪ್ರೊಫೆಸರ್ ಎಸ್‌ಪಿ ಸತಿ ಹೇಳಿದ್ದಾರೆ. 1905 ರ ಕಂಗ್ರಾ ಭೂಕಂಪ ಮತ್ತು 1934 ರ ಜನವರಿ 15 ರಂದು ಬಿಹಾರ - ನೇಪಾಳ ಗಡಿಯಲ್ಲಿ ಉಂಟಾದ 8.5 ತೀವ್ರತೆಯ ಕಂಪನದ ನಂತರ, ಇಲ್ಲಿಯವರೆಗೆ ಕೇಂದ್ರ ಭೂಕಂಪನ ಅಂತರ ಎಂದು ಕರೆಯಲ್ಪಡುವ ಉತ್ತರಾಖಂಡ ಪ್ರದೇಶವು 8 ಪ್ಲಸ್ ಭೂಕಂಪನವನ್ನು ಹೊಂದಬಹುದು ಎಂದು ಸತಿ ಹೇಳುತ್ತಾರೆ.

ಭೂಕಂಪ ಏಕೆ ಸಂಭವಿಸುತ್ತದೆ: ಹಿಮಾಲಯದ ಟೆಕ್ಟೋನಿಕ್ ಪ್ಲೇಟ್‌ಗಳಲ್ಲಿನ ಬದಲಾವಣೆಗಳಿಂದಾಗಿ ಕಂಪನಗಳು ಸಂಭವಿಸುತ್ತಲೇ ಇರುತ್ತವೆ. ಹಿಮಾಲಯದ ಅಡಿಯಲ್ಲಿ ನಿರಂತರ ಚಲನೆಯಿಂದಾಗಿ, ಭೂಮಿಯ ಮೇಲಿನ ಒತ್ತಡವು ಹೆಚ್ಚಾಗುತ್ತದೆ. ಇದು ಭೂಕಂಪದ ರೂಪವನ್ನು ಪಡೆಯುತ್ತದೆ. ಸೆಂಟ್ರಲ್ ಸೆಸ್ಮಿಕ್ ಗ್ಯಾಪ್ ಎಂದೂ ಕರೆಯಲ್ಪಡುವ ಉತ್ತರಾಖಂಡ ಪ್ರದೇಶವು 1991 ರಿಂದ ಉತ್ತರಕಾಶಿಯಲ್ಲಿ 7.0 ಮತ್ತು 1999 ರಲ್ಲಿ ಚಮೋಲಿಯಲ್ಲಿ 6.8 ಕಂಪನದ ಪ್ರಮಾಣದ ಭೂಕಂಪದ ನಂತರ ಯಾವುದೇ ದೊಡ್ಡ ಭೂಕಂಪಗಳು ಇಲ್ಲಿ ಸಂಭವಿಸಿಲ್ಲ. ಹೀಗಾಗಿ ವಿಜ್ಞಾನಿಗಳು ಖಂಡಿತವಾಗಿಯೂ ಈ ಪ್ರದೇಶದಲ್ಲಿ ದೊಡ್ಡ ಭೂಕಂಪ ಸಂಭವಿಸಬಹುದು ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:ಬೈಕ್ ಸವಾರನನ್ನು ಕೊಂದ ಹುಲಿ: ಟ್ರ್ಯಾಪ್ ಕ್ಯಾಮೆರಾ ಬಳಸಿ ಹುಲಿ ಸೆರೆಗೆ ಮುಂದಾದ ಸಿಬ್ಬಂದಿ

Last Updated : Jul 28, 2022, 9:27 PM IST

ABOUT THE AUTHOR

...view details