ನವದೆಹಲಿ/ಗಾಜಿಯಾಬಾದ್: ಗಾಜಿಯಾಬಾದ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಕೋಣೆಯಲ್ಲಿ ನೀರು ಸರಬರಾಜು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ತನ್ನ ಪತ್ನಿ ಹಾಗೂ ಮಗಳನ್ನು ಸಲಿಕೆಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. 35 ವರ್ಷದ ಪತ್ನಿ ರೇಖಾ ಮತ್ತು ಮಗಳನ್ನು ಆರೋಪಿ ಸಂಜಯ್ ಪಾಲ್ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಾಜಿಯಾಬಾದ್‌ನ ನಂದ್ ಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯಿಂದ 17 ವರ್ಷದ ಮಗ ಕಾಣೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ನೀರಿಲ್ಲದ ಕಾರಣ ಕೊಲೆ:ಮೂರು ಅಂತಸ್ತಿನಮನೆಯಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸವಾಗಿದ್ದರು ಎಂದು ಹೇಳಲಾಗುತ್ತಿದೆ. ಗಂಡನ ಅಂಗಡಿ ಇದ್ದು, ಆದಾಯ ಚೆನ್ನಾಗಿತ್ತು. ಆದರೆ ಕ್ರಮೇಣ ಅಂಗಡಿ ಮುಚ್ಚಿ ಸಂಪಾದನೆ ನಿಂತು ಹೋಗಿತ್ತು. ಇದರಿಂದಾಗಿ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಜಗಳದಿಂದಾಗಿ ಮೂರು ಅಂತಸ್ತಿನ ಮನೆಯ ಎರಡನೇ ಭಾಗದಲ್ಲಿ ಪತ್ನಿ ಮತ್ತು ಪುತ್ರಿ ವಾಸವಿದ್ದು, ಪತಿ ಮೂರನೇ ಮಹಡಿಯಲ್ಲಿ ವಾಸವಿದ್ದರು.