ಕೌಲಾಲಂಪುರ:ಮಲೇಷ್ಯಾ ಓಪನ್ ಸೂಪರ್ 750 ಟೂರ್ನಮೆಂಟ್ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಸಿಹಿ ಮತ್ತು ಕಹಿ ಫಲಿತಾಂಶಗಳನ್ನು ಪಡೆದಿದ್ದಾರೆ. ಪಿವಿ ಸಿಂಧು ಎರಡನೇ ರೌಂಡಿಗೆ ಮುನ್ನುಗ್ಗಿದರೆ, ಸೈನಾ ನೆಹ್ವಾಲ್ ಪ್ರಥಮ ಸುತ್ತಿನಲ್ಲೇ ಸೋಲನುಭವಿಸಿದರು.
ಮಲೇಷ್ಯಾ ಓಪನ್: 2ನೇ ಸುತ್ತಿಗೆ ಸಿಂಧು, ಸೈನಾಗೆ ಸೋಲು - ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್
ವಿಶ್ವ ಚಾಂಪಿಯನ್ ಆಗಿದ್ದ ಪಿವಿ ಸಿಂಧು, ಥಾಯ್ಲೆಂಡ್ನ 10ನೇ ವಿಶ್ವ ರ್ಯಾಂಕಿಂಗ್ ಆಟಗಾರ್ತಿ ಪೊರ್ನಪಾವೀ ಚೊಚೊವೊಂಗ್ ಅವರನ್ನು 21-13 21-17 ಸೆಟ್ಗಳಲ್ಲಿ ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು.
![ಮಲೇಷ್ಯಾ ಓಪನ್: 2ನೇ ಸುತ್ತಿಗೆ ಸಿಂಧು, ಸೈನಾಗೆ ಸೋಲು Sindhu wins, Saina loses in Malaysia Open](https://etvbharatimages.akamaized.net/etvbharat/prod-images/768-512-15687561-769-15687561-1656489618188.jpg)
ವಿಶ್ವ ಚಾಂಪಿಯನ್ ಆಗಿದ್ದ ಪಿವಿ ಸಿಂಧು, ಥಾಯ್ಲೆಂಡ್ನ 10ನೇ ವಿಶ್ವ ರ್ಯಾಂಕಿಂಗ್ ಆಟಗಾರ್ತಿ ಪೊರ್ನಪಾವೀ ಚೊಚೊವೊಂಗ್ ಅವರನ್ನು 21-13 21-17 ಸೆಟ್ಗಳಲ್ಲಿ ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು. ಲಂಡನ್ ಒಲಿಂಪಿಕ್ಸ್ನಲ್ಲಿ ರಜತ ಪದಕ ವಿಜೇತೆ ಸೈನಾ ನೆಹ್ವಾಲ್, ವಿಶ್ವದ 33ನೇ ರ್ಯಾಂಕ್ ಆಟಗಾರ್ತಿ ಅಮೆರಿಕದ ಐರಿಸ್ ವಾಂಗ್ ಎದುರು 37 ನಿಮಿಷ ಆಟವಾಡಿ 11-21 17-21 ಸೆಟ್ಗಳಲ್ಲಿ ಸೋತು ನಿರ್ಗಮಿಸಿದರು.
ಡಬಲ್ಸ್ನಲ್ಲಿ ಭಾರತದ ಬಿ ಸುಮೀತ್ ರೆಡ್ಡಿ ಮತ್ತು ಆಶ್ವಿನಿ ಪೊನ್ನಪ್ಪ ಜೋಡಿಯು ನೆದರ್ಲೆಂಡ್ನ ರಾಬಿನ್ ಟಾಬೆಲಿಂಗ್ ಮತ್ತು ಸೆಲೆನಾ ಪೀಯೆಕ್ ಅವರ ಜೋಡಿಯ ವಿರುದ್ಧ 15-21 21-19 17-21 ಸೆಟ್ಗಳಲ್ಲಿ ಪರಾಭವಗೊಂಡಿತು.