ಕರ್ನಾಟಕ

karnataka

ETV Bharat / bharat

ಟೋಕಿಯೋ 2020: ಬಾಕ್ಸಿಂಗ್​ನಲ್ಲಿ ಸಿಮ್ರನ್​ಜಿತ್​ ಕೌರ್​ಗೆ ಸೋಲು - Shooter Manu bhakar

60 ಕೆಜಿ ವಿಭಾಗದ ಎರಡನೇ ಸುತ್ತಿನ ಬಾಕ್ಸಿಂಗ್​ ಪಂದ್ಯದಲ್ಲಿ ಸಿಮ್ರನ್​ಜಿತ್​ ಕೌರ್​ ಸೋಲುಂಡಿದ್ದಾರೆ. ಜೊತೆಗೆ ರಾಪಿಡ್ ರೌಂಡ್ ಕ್ವಾಲಿಫಿಕೇಶನ್‌ (25 ಮೀ ಪಿಸ್ತೂಲ್ ಈವೆಂಟ್) ನಲ್ಲಿ ಮನು ಭಾಕರ್ ಹೊರ ಬಿದ್ದಿದ್ದಾರೆ.

Simranjit Kaur
ಸಿಮ್ರನ್​ಜಿತ್​ ಕೌರ್

By

Published : Jul 30, 2021, 8:59 AM IST

ಟೋಕಿಯೋ:ಇಂದು ನಡೆದ ಟೋಕಿಯೋ ಒಲಿಂಪಿಕ್ಸ್​ ಬಾಕ್ಸಿಂಗ್​ ಮತ್ತು ಶೂಟಿಂಗ್​ ವಿಭಾಗದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. 60 ಕೆಜಿ ವಿಭಾಗದ ಎರಡನೇ ಸುತ್ತಿನ ಬಾಕ್ಸಿಂಗ್​ ಪಂದ್ಯದಲ್ಲಿ ಸಿಮ್ರನ್​ಜಿತ್​ ಕೌರ್​ ಥಾಯ್ಲೆಂಡ್​​​​​​ನ ಸುಡಾಪೋರ್ನ್ ಸೀಸೊಂಡೀ ವಿರುದ್ಧ ಸೋಲುಂಡಿದ್ದಾರೆ.

ಇನ್ನು ರಾಪಿಡ್ ರೌಂಡ್ ಕ್ವಾಲಿಫಿಕೇಶನ್‌ (25 ಮೀ ಪಿಸ್ತೂಲ್ ಈವೆಂಟ್) ನಲ್ಲಿ ಮನು ಭಾಕರ್ ಹೊರಬಿದ್ದಿದ್ದಾರೆ. 582 ಪಾಯಿಂಟ್ಸ್​ ಪಡೆದು 15 ನೇ ಸ್ಥಾನಕ್ಕೆ ಇಳಿದ ಭಾಕರ್​ ಸೋಲುಂಡಿದ್ದಾರೆ. ಇನ್ನು ರಾಹಿ ಸರ್ನೋಬತ್​ ಕೂಡ 573 ಪಾಯಿಂಟ್ಸ್​ ಪಡೆದು 32 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಮೂಲಕ ಪಿಸ್ತೂಲ್​ ಈವೆಂಟ್​ನಲ್ಲಿ ಭಾರತಕ್ಕೆ ನಿರಾಸೆಯಾಗಿದೆ.

ಇನ್ನು ಬೆಳಗ್ಗೆ ನಡೆದ ಪಂದ್ಯದಲ್ಲಿ ನಂ.1 ಆರ್ಚರಿ ಪಟು ದೀಪಿಕಾ ಕುಮಾರಿ ರಷ್ಯಾದ ಆಟಗಾರ್ತಿ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ.

ABOUT THE AUTHOR

...view details