ಕರ್ನಾಟಕ

karnataka

ETV Bharat / bharat

ಬಿಜಾಪುರದ ಸಿಲ್ಗರ್ ಫೈರಿಂಗ್ ಕೇಸ್: ಗ್ರಾಮಸ್ಥರಿಂದ ಮಾಹಿತಿ ಪಡೆದ ತನಿಖಾ ತಂಡ..! - ಛತ್ತಿಸ್​ಗಢದಲ್ಲಿ ನಕ್ಸಲರ ದಾಳಿ

ಗ್ರಾಮಸ್ಥರೊಂದಿಗೆ ಚರ್ಚಿಸಿದ ವಿಚಾರಗಳ ಆಧಾರದ ಮೇಲೆ ತನಿಖಾಧಿಕಾರಿಗಳ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಯಾವ ರೀತಿಯ ಮಾತುಕತೆ ನಡೆದಿದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಬಿಜಾಪುರ ಶಾಸಕ ವಿಕ್ರಮ್ ಮಾಂಡವಿ ಹಾಗೂ ಬಸ್ತಾರ್ ಪ್ರಾಧಿಕಾರದ ಅಧ್ಯಕ್ಷ ಬಾಗೆಲ್​ ಮತ್ತು ತನಿಖಾ ತಂಡವು ಸ್ಥಳೀಯರೊಂದಿಗೆ 3 ಗಂಟೆಗಳ ಕಾಲ ಮಾತುಕತೆ ನಡೆಸದಿದ್ದಾರೆ.

ಗ್ರಾಮಸ್ಥರಿಂದ ಮಾಹಿತಿ ಪಡೆದ ತನಿಖಾ ತಂಡ
ಗ್ರಾಮಸ್ಥರಿಂದ ಮಾಹಿತಿ ಪಡೆದ ತನಿಖಾ ತಂಡ

By

Published : Jun 4, 2021, 4:40 PM IST

ಬಿಜಾಪುರ(ಛತ್ತೀಸ್‌ಗಢ): ಬಿಜಾಪುರ ಪ್ರದೇಶದಲ್ಲಿ ನಡೆದ ನಕ್ಸಲರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, 9 ಸದಸ್ಯರನ್ನೊಳಗೊಂಡ ತನಿಖಾ ತಂಸ ಸಿಲ್ಗರ್ ಪ್ರದೇಶಕ್ಕೆ ಭೇಟಿ ನೀಡಲು ಹೊರಟಿತ್ತು. ಈ ಮಧ್ಯೆ ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತವಾಗಿದ್ದರಿಂದ ಸಿಲ್ಗರ್​​ ಮತ್ತು ತಾರೆಮ್ ಗ್ರಾಮಗಳ ನಡುವೆ ಗ್ರಾಮಸ್ಥರನ್ನು ಕರೆಸಿ ಅಧಿಕಾರಿಗಳು ಚರ್ಚಿಸಿದ್ದಾರೆ.

ಗ್ರಾಮಸ್ಥರೊಂದಿಗೆ ಚರ್ಚಿಸಿದ ವಿಚಾರಗಳ ಆಧಾರದ ಮೇಲೆ ತನಿಖಾಧಿಕಾರಿಗಳ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಯಾವ ರೀತಿಯ ಮಾತುಕತೆ ನಡೆದಿದೆ ಎಂಬುದು ಈವರೆಗೆ ತಿಳಿದುಬಂದಿಲ್ಲ. ಬಿಜಾಪುರ ಶಾಸಕ ವಿಕ್ರಮ್ ಮಾಂಡವಿ ಹಾಗೂ ಬಸ್ತಾರ್ ಪ್ರಾಧಿಕಾರದ ಅಧ್ಯಕ್ಷ ಬಾಗೆಲ್​ ಮತ್ತು ತನಿಖಾ ತಂಡವು ಸ್ಥಳೀಯರೊಂದಿಗೆ 3 ಗಂಟೆಗಳ ಕಾಲ ಮಾತುಕತೆ ನಡೆಸದಿದ್ದಾರೆ. ತನಿಖಾ ತಂಡ ಮತ್ತೊಮ್ಮೆ ಜನರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ.

ತನಿಖಾ ತಂಡದಲ್ಲಿ ಇರೋರ್ಯಾರು?

ತನಿಖಾ ತಂಡದಲ್ಲಿ ಸಚಿವ ಕವಾಸಿ ಲಖ್ಮಾ ಹೊರತುಪಡಿಸಿ ಬಸ್ತಾರ್ ವಿಭಾಗದ ಎಲ್ಲ ಬುಡಕಟ್ಟು ಶಾಸಕರು ಸೇರಿದ್ದಾರೆ. ಬಸ್ತರ್ ಸಂಸದ ದೀಪಕ್ ಬೈಜ್ ಅವರ ಅಧ್ಯಕ್ಷತೆಯಲ್ಲಿ, ಬಸ್ತರ್ ಶಾಸಕ ಮತ್ತು ಬಸ್ತಾರ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕೇಶ್ವರ್ ಬಾಗೆಲ್, ಕೇಶ್ಕಲ್ ಶಾಸಕ ಮತ್ತು ಬಸ್ತರ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಸಂತ್ರಮ್ ನೇತಮ್, ದಂತೇವಾಡ ಶಾಸಕ ದೇವತಿ ಕರ್ಮ, ಕಂಕರ್ ಶಾಸಕ ಮತ್ತು ಸಂಸದೀಯ ಕಾರ್ಯದರ್ಶಿ ಶಿಶುಪಾಲ್ ಸೋರಿ, ಆಂಟಗರ ಶಾಸಕ ಮತ್ತು ಬಸ್ತಾರ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ವಿಕ್ರಮ್ ಮಾಂಡವಿ, ಚಿತ್ರಕೋಟ್ ಶಾಸಕ ರಾಜಮಾನ್ ಬೆಂಜಮ್, ನಾರಾಯಣಪುರ ಶಾಸಕ ಚಂದನ್ ಕಶ್ಯಪ್ ಇದ್ದಾರೆ. ಇದರೊಂದಿಗೆ ಸ್ಥಳೀಯ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಆಡಳಿತದ ಪ್ರತಿನಿಧಿಗಳನ್ನು ಸಹ ಈ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ತನಿಖಾ ತಂಡದ ವಿರುದ್ಧವೇ ಅಸಮಾಧಾನ?

ಕಾಂಗ್ರೆಸ್ ಸಮಿತಿ ರಚಿಸಿದ ಈ ತನಿಖಾ ತಂಡದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ತಂಡದಲ್ಲಿ ಕೊಂಟಾ ವಿಧಾನಸಭೆ ಶಾಸಕ ಮತ್ತು ಅಬಕಾರಿ ಸಚಿವ ಕವಾಸಿ ಲಖ್ಮಾ ಅವರನ್ನು ಸೇರಿಸದಿರುವ ಬಗ್ಗೆ ಬುಡಕಟ್ಟು ಮಹಾಸಭಾ ಅಧ್ಯಕ್ಷ ಮನೀಶ್ ಕುಂಜಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವು ಕೊಂಟಾ ವಿಧಾನಸಭೆಯ ವ್ಯಾಪ್ತಿಗೆ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಶಾಸಕರನ್ನು ತಂಡಕ್ಕೆ ಯಾಕೆ ಸೇರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details