ಗ್ಯಾಂಗ್ಟಕ್ (ಸಿಕ್ಕಿಂ):ಸಿಕ್ಕಿಂನಲ್ಲಿಂದು ಹಿಮ ಕುಸಿತ ಉಂಟಾಗಿ ಆರು ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 80ಕ್ಕೂ ಹೆಚ್ಚು ಜನರು ಹಿಮದಡಿ ಸಿಲುಕಿರುವ ಶಂಕೆ ಇದೆ. ಗ್ಯಾಂಗ್ಟಕ್‌ನಿಂದ ನಾಥುಲಾಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ರಸ್ತೆಯ 15ನೇ ಮೈಲಿನಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಹಿಮದಲ್ಲಿ ಸಿಲುಕಿದ್ದ 100 ವಾಹನಗಳು: 50 ಮಕ್ಕಳು ಸೇರಿ 370 ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ
ಮಧ್ಯಾಹ್ನ 12.20ರ ಸುಮಾರಿಗೆ ಹಿಮಕುಸಿತವಾಗಿದೆ. ಮೃತಪಟ್ಟ ಆರು ಮಂದಿಯಲ್ಲಿ ನಾಲ್ವರು ಪುರುಷರು ಮತ್ತು ಒಬ್ಬ ಮಹಿಳೆ ಹಾಗೂ ಒಂದು ಮಗು ಸೇರಿದೆ. ಇತರ 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಮೀಪದ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, 150ಕ್ಕೂ ಹೆಚ್ಚು ಪ್ರವಾಸಿಗರು ಹಿಮಪಾತದಿಂದಾಗಿ ರಸ್ತೆಯಲ್ಲಿ ಸಿಲುಕಿಕೊಂಡಿದ್ದರು. ಇದುವರೆಗೆ ಹಿಮದಡಿಯಲ್ಲಿ ಸಿಲುಕಿದ 30 ಪ್ರವಾಸಿಗರನ್ನು ರಕ್ಷಿಸಲಾಗಿದ್ದು, ಗ್ಯಾಂಗ್ಟಕ್‌ನ ಎಸ್‌ಟಿಎನ್‌ಎಂ ಆಸ್ಪತ್ರೆ ಮತ್ತು ಸೆಂಟ್ರಲ್ ರೆಫರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಇಲ್ಲಿನ ನಾಥುಲಾ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಇದು ರಮಣೀಯ ಪ್ರಾಕೃತಿಕ ತಾಣ. ನಾಥುಲಾ ಪಾಸ್ ಚೀನಾ ಗಡಿಯಲ್ಲಿದೆ.
ಇದನ್ನೂ ಓದಿ:ಸಿಕ್ಕಿಂನಲ್ಲಿ ಭಾರಿ ಹಿಮಪಾತ.. 15 ಕಿ.ಮೀಟ್ರಾಫಿಕ್ ಜಾಮ್, ಒಂದು ಸಾವಿರ ಪ್ರವಾಸಿಗರನ್ನ ರಕ್ಷಿಸಿದ ಸೇನೆ
13ನೇ ಮೈಲಿಗೆ ಮಾತ್ರ ಪ್ರವಾಸಿಗರಿಗೆ ಪಾಸ್:ನಾಥುಲಾಗೆ ಜವಾಹರಲಾಲ್ ನೆಹರು ರಸ್ತೆಯ 13ನೇ ಮೈಲಿಯವರೆಗೆ ಮಾತ್ರ ಪ್ರವಾಸಿಗರಿಗೆ ಪಾಸ್ಗಳನ್ನು ನೀಡಲಾಗುತ್ತಿದೆ. ಆದರೂ, ಪ್ರವಾಸಿಗರು ಅನುಮತಿಯಿಲ್ಲದೆ 15ನೇ ಮೈಲ್‌ಗೆ ಹೋಗುತ್ತಿದ್ದಾರೆ ಎಂದು ಸ್ಥಳೀಯ ಚೆಕ್ಟ್ಪೋಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ವಾಹನ ಚಾಲಕರ ನೆರವಿನಿಂದ ಸಿಕ್ಕಿಂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಹಿಂದೆ ನೂರಾರು ಪ್ರವಾಸಿಗರ ರಕ್ಷಿಸಿದ್ದ ಸೇನೆ:ಉತ್ತರ ಭಾರತ ಮತ್ತು ಈಶಾನ್ಯ ಭಾರತದಲ್ಲಿ ನಿರಂತರವಾಗಿ ಹಿಮಪಾತ ಮುಂದುವರೆದಿದೆ. ಕಳೆದ ತಿಂಗಳು ಪೂರ್ವ ಸಿಕ್ಕಿಂನಲ್ಲಿ ಇದೇ ರೀತಿ ಭಾರಿ ಪ್ರಮಾಣದ ಹಿಮಪಾತ ಉಂಟಾಗಿತ್ತು. ಮಾರ್ಚ್ ತಿಂಗಳಲ್ಲಿ ಎರಡು ಬಾರಿ ಸಿಕ್ಕಿಂ ಪೊಲೀಸರು ಮತ್ತು ಭಾರತೀಯ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೂರಾರು ಪ್ರವಾಸಿಗರನ್ನು ರಕ್ಷಿಸಿದ್ದರು.
ಮಾರ್ಚ್ 12ರಂದು ನಾಥುಲಾ ಮತ್ತು ತ್ಸೋಮ್ಗೊ (ಚಾಂಗು) ಸರೋವರದಿಂದ ಪ್ರವಾಸಿಗರು ಹಿಂದಿರುಗುತ್ತಿದ್ದಾಗ ಹಿಮ ಕುಸಿತ ಸಂಭವಿಸಿತ್ತು. ಇದರಿಂದ ಮಕ್ಕಳು ಮತ್ತು ಮಹಿಳೆಯರು ಸೇರಿ ಸುಮಾರು 370 ಜನ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ, ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹಲವಾರು ವಾಹನಗಳು ರಸ್ತೆಯಲ್ಲೇ ಸ್ಥಗಿತಗೊಂಡಿದ್ದವು. ಆಗ ಯೋಧರು ಮತ್ತು ಪೊಲೀಸರು ಗಡಿ ರಸ್ತೆಗಳ ನಿರ್ವಹಣಾ ಸಂಸ್ಥೆಯ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (ಜಿಆರ್‌ಇಎಫ್) ಜೊತೆಗೆ ಸಮನ್ವಯ ಸಾಧಿಸಿ ಎಲ್ಲ ಪ್ರವಾಸಿಗರನ್ನು ರಕ್ಷಿಸಿದ್ದರು. ಇದಾದ ನಂತರ ಮಾರ್ಚ್ 17ರಂದು ಒಂದು ಸಾವಿರ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿತ್ತು. ಈ ವೇಳೆ 15 ಕಿಮೀವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ:ಮತ್ತೆ ಹಿಮಾಪಾತ: ಬರಿನಾಥ ಧಾಮ ಹಿಮಾವೃತ