ನವದೆಹಲಿ: ದೆಹಲಿಯ ಹೈದರ್ಪುರ ಪ್ರದೇಶದಲ್ಲಿ ಸಿಕ್ಕಿಂ ಪೊಲೀಸ್ ಸಿಬ್ಬಂದಿಯೊಬ್ಬ ಮೂವರು ಸಹದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಅಂಬೇಡ್ಕರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡು ಹಾರಿಸಿರುವ ಪೊಲೀಸ್ ಸಿಬ್ಬಂದಿಯ ಬಂಧನ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದೆ.
ಸಹದ್ಯೋಗಿಗಳ ಮೇಲೆ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸ್.. ಇಬ್ಬರು ಸಿಬ್ಬಂದಿ ಸಾವು - ಸಹದ್ಯೋಗಿಗಳ ಮೇಲೆ ಪೊಲೀಸ್ ಸಿಬ್ಬಂದಿ ಗುಂಡಿನ ದಾಳಿ
ಮೂವರು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಲಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Sikkim Police personnel shoots dead two colleagues
ದೆಹಲಿಯ ಹೈದರ್ಪುರ ಪ್ರದೇಶದಲ್ಲಿರುವ ನೀರಿನ ಘಟಕದಲ್ಲಿ ಸಿಕ್ಕಿಂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಉಧಂಪುರ್ ಜಿಲ್ಲೆಯ ಇಂಡೋ ಟಿಬೆಟಿಯನ್ ಬಾರ್ಡರ್ನಲ್ಲಿ ಸಿಕ್ಕಿಂನ ಮೂವರು ಸಿಬ್ಬಂದಿಗಳ ನೇಮಕ ಮಾಡಲಾಗಿತ್ತು. ಈ ವೇಳೆ ಸಹ ಮೂವರು ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ದೆಹಲಿಯಲ್ಲೂ ಇಂತಹ ಘಟನೆ ನಡೆದಿದೆ.
Last Updated : Jul 18, 2022, 6:26 PM IST