ಬರೇಲಿ (ಉತ್ತರ ಪ್ರದೇಶ):ಜಿಲ್ಲೆಯ ಇಶಾಯ್ ಮಿಷನರಿ ನಡೆಸುತ್ತಿರುವ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಸಿಖ್ ವಿದ್ಯಾರ್ಥಿಗಳು ತಲೆಗೆ ಟರ್ಬನ್ ಧರಿಸಿ ಬರುತ್ತಿರುವ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ಶಾಲೆಯ ಪ್ರಾಂಶುಪಾಲರು ಬುಧವಾರ ಸಿಖ್ ಸಮುದಾಯದ ವಿದ್ಯಾರ್ಥಿಗಳನ್ನು ಕರೆದು, ತಲೆಗೆ ಪೇಟ ಧರಿಸಿ ಬರುವಂತಿಲ್ಲ ಎಂದು ಹೇಳಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ಇದನ್ನು ಖಂಡಿಸಿ ಇಂದು ಪ್ರತಿಭಟನೆ ಸಹ ನಡೆಸಿದ್ದಾರೆ.
ವಿದ್ಯಾರ್ಥಿಗಳು ಟರ್ಬನ್ ಧರಿಸಲು ನಿಷೇಧ: ಪೋಷಕರಿಂದ ಶಾಲೆ ಎದುರು ಪ್ರತಿಭಟನೆ - ಬರೇಲಿಯಲ್ಲಿ ವಿದ್ಯಾರ್ಥಿಗಳು ಟರ್ಬನ್ ಧರಿಸಲು ನಿಷೇಧ
ಬರೇಲಿಯಲ್ಲಿ ಕ್ರಿಶ್ಚಿಯನ್ ಮಿಷನರಿ ನಡೆಸುತ್ತಿರುವ ಸೇಂಟ್ ಫ್ರಾನ್ಸಿಸ್ ಶಾಲೆಯು ಸಿಖ್ ವಿದ್ಯಾರ್ಥಿಗಳಿಗೆ ಪೇಟ, ಕಿರ್ಪಾನ್ ಧರಿಸುವುದನ್ನು ನಿರ್ಬಂಧಿಸಿದೆ. ಇದರಿಂದ ರೊಚ್ಚಿಗೆದ್ದ ಸಿಖ್ ಸಮುದಾಯವು ಶಾಲೆ ಮುಂದೆ ಪ್ರತಿಭಟನೆ ನಡೆಸಿತು. ಪ್ರಾಂಶುಪಾಲರು ಕ್ಷಮೆಯಾಚಿಸಿದ ನಂತರ ವಿಷಯ ಇತ್ಯರ್ಥವಾಯಿತು.
ವಿದ್ಯಾರ್ಥಿಗಳು ಶಾಲೆಯ ವಸ್ತ್ರಸಂಹಿತೆ ಪ್ರಕಾರ ಬರಬೇಕು. ಯಾವುದಾದರೂ ವಿದ್ಯಾರ್ಥಿ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ಧರಿಸಿ ಬಂದರೆ, ಅವರನ್ನು ಶಾಲೆಯಿಂದ ಹೊರ ಹಾಕಲಾಗುತ್ತದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಷಯ ತಿಳಿದ ಸಿಖ್ ಸಮುದಾಯದ ನೂರಾರು ಜನರು ಸೇಂಟ್ ಫ್ರಾನ್ಸಿಸ್ ಶಾಲೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಶಾಲೆಯ ಪ್ರಾಂಶುಪಾಲರು ನಮ್ಮ ಮಕ್ಕಳಿಗೆ ಸಿಖ್ ಧರ್ಮದ ಪೇಟ, ಕಿರ್ಪಾನ್, ಪಕಡ್ ಧರಿಸಿ ಬರುವುದನ್ನು ನಿಷೇಧಿಸಿದ್ದು, ಇದು ತಪ್ಪು ಎಂದು ಪ್ರತಿಭಟನಾನಿರತ ಸಿಖ್ ಸಮುದಾಯದ ಜನರು ಹೇಳಿದ್ದಾರೆ. ಬಳಿಕ ಶಾಲೆಯ ಪ್ರಾಂಶುಪಾಲೆ ಅನೆರೋಸ್ ತಮ್ಮ ತಪ್ಪನ್ನು ಒಪ್ಪಿಕೊಂಡು ಸಿಖ್ ಸಮುದಾಯದ ಜನರಲ್ಲಿ ಕ್ಷಮೆ ಯಾಚಿಸಿದರು ಎನ್ನಲಾಗ್ತಿದೆ.