ನವದೆಹಲಿ : ರಾಷ್ಟ್ರರಾಜಧಾನಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಪೊಲೀಸರು ಹಾಗೂ ಹೋರಾಟಗಾರರ ನಡುವೆ ಘರ್ಷಣೆ ನಡೆದಿದ್ದು, ಕೆಂಪುಕೋಟೆಯ ಮೇಲೆ ಹೋರಾಟಗಾರರು ಸಿಖ್ ಧರ್ಮದ ನಿಶಾನ್ ಸಾಹೀಬ್ ಧ್ವಜ ಹಾರಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ತ್ರಿಕೋನಾಕೃತಿಯ ಈ ಧ್ವಜ ಸಿಖ್ ಧರ್ಮಕ್ಕೆ ಸಂಬಂಧಿಸಿದ್ದಾಗಿದೆ. ಈ ಧ್ವಜದಲ್ಲಿ ಖಾಂಡಾ ಎಂದು ಕರೆಯಲ್ಪಡುವ ಎರಡು ಖಡ್ಗಗಳಿರುತ್ತವೆ. ಸಾಮಾನ್ಯವಾಗಿ ಈ ಧ್ವಜಗಳು ಗುರುದ್ವಾರಗಳ ಕಟ್ಟಡಗಳ ಮೇಲೆ ಕಂಡು ಬರುತ್ತವೆ.
ಇದನ್ನೂ ಓದಿ:ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಪಡೆದ ಕುಟುಂಬಕ್ಕೆ ಅನ್ಯಾಯ..
ದೆಹಲಿಗೆ ಹೊರಡುತ್ತಿದ್ದ ಟ್ರ್ಯಾಕ್ಟರ್ ರ್ಯಾಲಿಯ ತಡೆದ ನಂತರ ಪ್ರತಿಭಟನೆ ಮಾಡಿದ ರೈತರು ಪೊಲೀಸರ ನಡುವೆ ಘರ್ಷಣೆಗೆ ಇಳಿದಿದ್ದಾರೆ. ಇದೇ ವೇಳೆ ಕೆಂಪು ಕೋಟೆಯ ಮೇಲೆ ಸಿಖ್ ಧರ್ಮದ ಬಾವುಟ ಹಾರಿಸಿದ್ದು, ಕೆಲ ಸಮಯದ ನಂತರ ಪೊಲೀಸರು ಈ ಬಾವುಟವನ್ನು ತೆರವುಗೊಳಿಸಿದ್ದಾರೆ.
ವಿಶೇಷ ಅಂದ್ರೆ ಈ ಟ್ರ್ಯಕ್ಟರ್ ರ್ಯಾಲಿಯುದ್ಧಕ್ಕೂ ಲಕ್ಷಾಂತರ ತ್ರಿವರ್ಣ ಧ್ವಜಗಳನ್ನ ರೈತರು ಹಾರಿಸಿರೋದು ವಿಶೇಷ. ಅಷ್ಟೇ ಅಲ್ಲ, ಕೆಂಪುಕೋಟೆಯ ಮುಂದೆಯೂ ಇದೇ ಪ್ರತಿಭಟಾನಾಕಾರರು ತ್ರಿವರ್ಣಧ್ವಜಗಳನ್ನೂ ಹಿಡಿದಿದ್ದು ಗಮನ ಸೆಳೆಯುವಂತಾದ್ದಾಗಿದೆ.