ನವದೆಹಲಿ :ದೇಶದ ವಿಮಾನ ನಿಲ್ದಾಣಗಳಲ್ಲಿ ಸಿಖ್ ಸಮುದಾಯದ ಪ್ರಯಾಣಿಕರು ಮತ್ತು ನೌಕರರು ಕಿರ್ಪಾನ್ ತೆಗೆದುಕೊಂಡು ಹೋಗುವುದಕ್ಕೆ ವಿಧಿಸಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆರವು ಮಾಡಿದೆ. ನಿರ್ದಿಷ್ಟ ಅಳತೆಯ ಕಿರ್ಪಾನ್ ಕೊಂಡೊಯ್ಯಲು ಅವಕಾಶ ಮಾಡಿಕೊಡಲಾಗಿದೆ.
ಸಿಖ್ಖರ ಐದು ವಿಶಿಷ್ಟ ಗುರುತುಗಳಲ್ಲಿ ಕಿರ್ಪಾನ್ (ಚಾಕು) ಕೂಡ ಒಂದಾಗಿದೆ. ದೇಶಿಯ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಇದನ್ನು ಸಾಗಿಸಲು ಅವಕಾಶ ನೀಡಲಾಗಿದೆ. ಕಿರ್ಪಾನ್ ಉದ್ದ 15.23 ಸೆಂಟಿಮೀಟರ್ (6 ಇಂಚು) ಮೀರಬಾರದು ಎಂದು ನಾಗರಿಕ ವಿಮಾನಯಾನ ಇಲಾಖೆ ಹೊಸ ಆದೇಶ ಹೊರಡಿಸಿದೆ.
ಈ ಹಿಂದೆ ಅಮೃತಸರ್ ವಿಮಾನ ನಿಲ್ದಾಣದಲ್ಲಿ ಕಿರ್ಪಾನ್ ಧರಿಸಿದ ಕಾರಣಕ್ಕೆ ಸಿಖ್ ಉದ್ಯೋಗಿಯೊಬ್ಬರಿಗೆ ಕರ್ತವ್ಯ ನಿರ್ವಹಿಸದಂತೆ ನಿರ್ಬಂಧ ಹೇರಲಾಗಿತ್ತು. ಈ ಬಗ್ಗೆ ಸಾಕಷ್ಟು ಸಿಖ್ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ಅಲ್ಲದೇ, ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಅವರು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದು ಈ ನಿರ್ಬಂಧವನ್ನು ತೆರವು ಮಾಡಬೇಕೆಂದು ಒತ್ತಾಯಿಸಿದ್ದರು.
ಇದನ್ನೂ ಓದಿ:ನೇತಾಜಿ 125ನೇ ಜನ್ಮ ದಿನೋತ್ಸವ: ಪ್ರಧಾನಿ ಅಧ್ಯಕ್ಷತೆಯಲ್ಲಿ ದೇವೇಗೌಡ, ಡಾ.ಸಿಂಗ್ ಸೇರಿ 82 ಸದಸ್ಯರ ಸಮಿತಿ ರಚನೆ