ಸಿಕರ್ (ರಾಜಸ್ಥಾನ):ಫತೇಪುರ್ ಶೇಖಾವತಿ ಜಿಲ್ಲೆಗೆ ಸೇರಿದ ಇಬ್ಬರು ಸಹೋದರರು ಕಾಲೇಜೊಂದರ ನಿರ್ಮಾಕ್ಕೆ ಭೂಮಿಯನ್ನು ದಾನವಾಗಿ ನೀಡಿದ್ದು, ಇವರ ಈ ಕಾರ್ಯಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಉದ್ಯಮಿ ಸಹೋದರರನ್ನು ಹೊಗಳುತ್ತಿದ್ದಾರೆ. ಈ ಸಹೋದರರು ದಾವೂದ್ ಹನೀಫ್ ಪಿನಾರಾ ಮತ್ತು ಗುಲಾಮ್ ರಬ್ಬಾನಿ ಪಿನಾರಾ. ಇಬ್ಬರೂ ದುಬೈನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇವರ ತಾಯಿಯ ಪುಣ್ಯತಿಥಿಯ ದಿನದಂದು ಪಿನಾರ ಸಹೋದರರು ಭೂಮಿ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಉನ್ನತ ಶಿಕ್ಷಣ ಪಡೆಯಲು ಹೆಣ್ಣು ಮಕ್ಕಳಿಗೆ ಸಮಸ್ಯೆ:ಫತೇಪುರ್ ಶೇಖಾವತಿಯಲ್ಲಿ ಬಹಳ ವರ್ಷಗಳಿಂದ ಸರ್ಕಾರಿ ಮಹಿಳಾ ಕಾಲೇಜು ಇರಲಿಲ್ಲ, ಹೀಗಾಗಿ ಇಲ್ಲಿನ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅನೇಕ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದು ಬರಿ ಕನಸಾಗಿತ್ತು. ಸರ್ಕಾರಿ ಕಾಲೇಜು ಇಲ್ಲದೇ ಇದ್ದುದರಿಂದ ಅನೇಕ ಹೆಣ್ಣು ಮಕ್ಕಳು ಪ್ರೌಢ ಶಾಲೆಯ ನಂತರ ಉನ್ನತ ಶಿಕ್ಷಣಕ್ಕೆ ಪಡೆಯಲು ಬೆರೆ ಊರಿಗೆ ಹೋಗಲು ಸಾಧ್ಯವಾಗದೇ ತಮ್ಮ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದರು. ಇಲ್ಲಿನ ಸ್ಥಳೀಯ ಶಾಸಕ ಹಕಂ ಅಲಿ ಅವರ ಪ್ರಯತ್ನದಿಂದಾಗಿ ಕಳೆದ ಬಜೆಟ್ನಲ್ಲಿ ಸರ್ಕಾರ ಇಲ್ಲಿ ಮಹಿಳಾ ಕಾಲೇಜು ನಿಮಾರ್ಣ ಮಾಡುವುದಾಗಿ ಘೋಷಿಸಿ 6 ಕೋಟಿ ರೂ. ಹಣ ಬಿಡುಗಡೆ ಕೂಡಾ ಮಾಡಿತ್ತು.
80 ಲಕ್ಷ ರೂಪಾಯಿ ಮೌಲ್ಯದ 16 ಬಿಘಾ ಭೂಮಿ ದಾನ ಮಾಡಿದ ಪಿನಾರ ಸಹೋದರರು:ಶಾಸಕ ಮತ್ತು ಸ್ಥಳೀಯರ ಸತತ ಪ್ರಯತ್ನದಿಂದ ಸರ್ಕಾರ ಮಹಿಳಾ ಕಾಲೇಜು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಆದರೆ, ಕಾಲೇಜು ನಿರ್ಮಾಣಕ್ಕೆ ಭೂಮಿ ಲಭ್ಯ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿತ್ತು. ಸರ್ಕಾರಿ ಜಾಗದ ಕೊರತೆಯಿಂದಾಗಿ ಮಹಿಳಾ ಕಾಲೇಜು ನಿರ್ಮಿಸಲು ವಿಳಂಬವಾಗಿತ್ತು.