ಚಂಡೀಗಢ(ಪಂಜಾಬ್):ಪಂಜಾಬ್ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹರಸಾಹಸ ಪಡ್ತಿದೆ. ಇದರ ಮಧ್ಯೆ ಸುದ್ದಿಗೋಷ್ಠಿ ನಡೆಸಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸಹೋದರಿ ಸುಮನ್ ಗಂಭೀರ ಆರೋಪ ಮಾಡಿದ್ದಾರೆ.
ಸಹೋದರ ನವಜೋತ್ ಸಿಂಗ್ ಸಿಧು ವಿರುದ್ಧವೇ ಗಂಭೀರ ಆರೋಪ ಮಾಡಿರುವ ಸುಮನ್ ತೂರ್, ನಮ್ಮ ತಂದೆ ಭಗವಂತ್ ಸಿಧು 1986ರಲ್ಲಿ ಮೃತಪಟ್ಟ ಬಳಿಕ ವೃದ್ಧ ತಾಯಿ ನಿರ್ಮಲ್ ಭಗವಂತ್ ಮತ್ತು ಅಕ್ಕನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಹಣದ ಆಸೆಗೋಸ್ಕರ ಈ ರೀತಿಯಾಗಿ ನಡೆದುಕೊಂಡಿದ್ದು, ಇದೇ ಕಾರಣದಿಂದಾಗಿ ರೈಲ್ವೆ ನಿಲ್ದಾಣದಲ್ಲಿ ನಿರ್ಗತಿಕಳಾಗಿ ತಾಯಿ ಸಾವನ್ನಪ್ಪುವಂತಾಯಿತು ಎಂದು ತಿಳಿಸಿದ್ದಾರೆ.
ನವಜೋತ್ ಸಿಂಗ್ ಸಿಧು ಮೇಲೆ ಗಂಭೀರ ಆರೋಪ ಮಾಡಿದ ಸಹೋದರಿ ಇದನ್ನೂ ಓದಿರಿ:PUBG ಹುಚ್ಚು : ಕುಟುಂಬವನ್ನೇ ಗುಂಡಿಕ್ಕಿ ಕೊಂದ 14 ವರ್ಷದ ಬಾಲಕ!
ಚುನಾವಣೆ ಬೆನ್ನಲ್ಲೇ ಗಂಭೀರ ಆರೋಪ : ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಸವಾಗಿರುವ ಸುಮನ್ ತೌರ್, ಇದೀಗ ಚಂಡೀಗಢಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದರು. ನನ್ನ ತಾಯಿ ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ಅದಕ್ಕೆ ಸಂಬಂಧಿಸಿದ ಅನೇಕ ಸಾಕ್ಷ್ಯಾಧಾರಗಳು ನಮ್ಮ ಬಳಿ ಇವೆ ಎಂದು ತಿಳಿಸಿದ್ದಾರೆ.
ತನಗೆ ಎರಡು ವರ್ಷವಿದ್ದಾಗ ತನ್ನ ತಂದೆ-ತಾಯಿ ಬೇರ್ಪಟ್ಟಿದ್ದಾರೆಂದು ಕಾಂಗ್ರೆಸ್ ನಾಯಕ ಸಿಧು ಎಲ್ಲರ ಮುಂದೆ ಸುಳ್ಳು ಹೇಳಿದ್ದಾರೆಂದು ತಿಳಿಸಿದ್ದಾರೆ. ಆದರೆ, ತನ್ನ ತಾಯಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಾವನ್ನಪ್ಪಿರುವ ಸುದ್ದಿಯನ್ನ ಎಲ್ಲರಿಂದಲೂ ಮುಚ್ಚಿಟ್ಟಿದ್ದಾರೆ.
ಈ ವಿಚಾರವಾಗಿ ಅವರು ತಾಯಿ ಹಾಗೂ ಸಹೋದರಿಯ ಬಳಿ ಕ್ಷಮೆ ಕೇಳಬೇಕು ಎಂದಿರುವ ನವಜೋತ್ ಸಿಂಗ್ ಸಿಧು ಸಹೋದರಿ, ನನ್ನನ್ನು ಅವರು ಬ್ಲಾಕ್ ಮಾಡಿದ್ದಾರೆ. ಇಲ್ಲಿಗೆ ಬಂದ ತಕ್ಷಣವೇ ಅವರನ್ನ ಸಂಪರ್ಕಿಸುವ ಪ್ರಯತ್ನ ಮಾಡಿದೆ. ಆದರೆ, ಸಿಧು ಮನೆ ಬಾಗಿಲು ತೆರೆಯಲಿಲ್ಲ. ಫೋನ್ನಲ್ಲೂ ನನ್ನನ್ನ ಬ್ಲಾಕ್ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ನಾನು ಸುದ್ದಿಗೋಷ್ಠಿ ನಡೆಸಬೇಕಾಯಿತು ಎಂದು ತಿಳಿಸಿದ್ದಾರೆ.
ಪಂಜಾಬ್ ಚುನಾವಣೆ ಬೆನ್ನಲ್ಲೇ ನವಜೋತ್ ಸಿಂಗ್ ಸಿಧು ಸಹೋದರಿ ಹೇಳಿಕೆ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ವಲಯದಲ್ಲಿ ಹೆಚ್ಚಿನ ಸಂಚಲನ ಮೂಡಿಸಿದೆ. ಇದೇ ವಿಚಾರವನ್ನಿಟ್ಟುಕೊಂಡು ಶಿರೋಮಣಿ ಅಕಾಲಿದಳ ಸಿಧು ವಿರುದ್ಧ ವಾಗ್ದಾಳಿ ನಡೆಸಿದೆ.
ಆದಷ್ಟು ಬೇಗ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿಕೊಂಡಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ