ಕರ್ನಾಟಕ

karnataka

ETV Bharat / bharat

ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ವಹಿಸಿ: ವಿಧಾನ ಸಭಾದ ಹೊರಗೆ ಪೋಷಕರ ಧರಣಿ - ಗೋಲ್ಡಿ ಬ್ರಾರ್ ವಿರುದ್ಧ ಕ್ರಮಕ್ಕೆ ಆಗ್ರಹ

ಪಂಜಾಬ್​ನ ವಿಧಾನ ಸಭಾದ ಹೊರಗೆ ಸಿಧು ಮೂಸೆವಾಲಾ ಅವರ ಬಲ್ಕೌರ್ ಸಿಂಗ್ ಮತ್ತು ತಾಯಿ ಚರಣ್ ಕೌರ್ ಪ್ರತಿಭಟನೆ ನಡೆಸಿದ್ದಾರೆ.

Sidhu MooseWala parents sitting on protest outside the Punjab Vidhan Sabha
ಸಿಧು ಮೊಸೆವಾಲಾ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ವಹಿಸಿ: ವಿಧಾನ ಸಭಾದ ಹೊರಗೆ ಪೋಷಕರ ಧರಣಿ

By

Published : Mar 7, 2023, 10:15 PM IST

ಚಂಡೀಗಢ (ಪಂಜಾಬ್): ಕಳೆದ ಹತ್ಯೆಯಾದ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ತಂದೆ ಮತ್ತು ತಾಯಿ ಪಂಜಾಬ್​ನ ವಿಧಾನ ಸಭಾದ ಹೊರಗೆ ಮಂಗಳವಾರ ಧರಣಿ ಕುಳಿದಿದ್ದರು. ರಾಜ್ಯದ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಮೂರನೇ ದಿನವಾದ ಇಂದು ಕಲಾಪ ಆರಂಭಕ್ಕೂ ಮುನ್ನ ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಮತ್ತು ತಾಯಿ ಚರಣ್ ಕೌರ್ ಪ್ರತಿಭಟನೆ ನಡೆಸಿದರು. ಇದೇ ವೇಳೆ ತಮ್ಮ ಮಗನ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಪೋಷಕರು ಒತ್ತಾಯಿಸಿದರು.

ಇದನ್ನೂ ಓದಿ:ಸೆಂಟ್ರಲ್​ ಜೈಲಿನಲ್ಲಿ ಗ್ಯಾಂಗ್​ಸ್ಟರ್​ಗಳ ಹತ್ಯೆಗೈದು ಸಹ ಕೈದಿಗಳ ಸಂಭ್ರಮಾಚರಣೆ: ವಿಡಿಯೋ ವೈರಲ್​

2022ರ ಮೇ 29ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾಂಗ್ರೆಸ್​ ನಾಯಕರೂ ಆಗಿದ್ದ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಪಂಜಾಬ್ ಪೊಲೀಸರು ಮೂಸೆವಾಲಾ ಸೇರಿದಂತೆ 424 ಜನ ಪ್ರಮುಖ ಪೊಲೀಸ್​ ಭದ್ರತೆ ಹಿಂತೆಗೆದುಕೊಂಡ ಎರಡು ದಿನಗಳ ನಂತರ ಈ ಕೊಲೆ ನಡೆದಿತ್ತು. ಇತ್ತೀಚೆಗೆ ತಂದೆ ಬಲ್ಕೌರ್ ಸಿಂಗ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು.

ಇದರ ಬೆನ್ನಲ್ಲೇ ಬಲ್ಕೌರ್ ಸಿಂಗ್ ಹಾಗೂ ಚರಣ್ ಕೌರ್ ದಂಪತಿ ರಾಜ್ಯದ ವಿಧಾನ ಸಭಾದ ಧರಣಿ ನಡೆಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಶಾಸಕರಾದ ಪ್ರತಾಪ್ ಬಾಜ್ವಾ, ಸುಖಪಾಲ್ ಖೈರಾ ಸಹ ಸಿಧು ಮೊಸೆವಾಲಾ ಪೋಷಕರಿಗೆ ಸಾಥ್​ ನೀಡಿದರು. ಈ ಸಂದರ್ಭದಲ್ಲಿ ಬಲ್ಕೌರ್ ಸಿಂಗ್ ಮಾತನಾಡಿ, ನನ್ನ ಮಗ ಸಿಧು ಮೂಸೆವಾಲಾ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.

ಗೋಲ್ಡಿ ಬ್ರಾರ್ ವಿರುದ್ಧ ಕ್ರಮಕ್ಕೆ ಆಗ್ರಹ: ಅಲ್ಲದೇ, ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಯಾವುದೇ ಆರೋಪಿಗಳನ್ನು ಬಂಧಿಸಲಾಗಿಲ್ಲ. ಆದರೆ, ಕೇವಲ ಗೂಂಡಾಗಳು ಹಣ ತೆಗೆದುಕೊಂಡು ನನ್ನ ಮಗನನ್ನು ಗುಂಡಿಕ್ಕಿ ಕೊಂದಿದ್ದಾರೆ. ನನ್ನ ಮಗನನ್ನು ಟಾರ್ಗೆಟ್ ಮಾಡಿದ ಮಾಸ್ಟರ್ ಮೈಂಡ್, ಗ್ಯಾಂಗ್​ಸ್ಟರ್​ ಗೋಲ್ಡಿ ಬ್ರಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ಬಲ್ಕೌರ್ ಸಿಂಗ್ ಒತ್ತಾಯಿಸಿದರು.

ಹಲವು ಬಾರಿ ಬೆದರಿಕೆಗಳು ಬಂದಿವೆ: ಇದೇ ವೇಳೆ ಸಿದ್ದು ಮೂಸೆವಾಲ ತಂದೆಯಾಗಿ ನಾನೇನು ತಪ್ಪು ಮಾಡುತ್ತಿದ್ದೇನೆ?, ನನ್ನ ಮಗನ ಪ್ರಕರಣದಲ್ಲಿ ನಾನು ಹೋರಾಡಬಾರದೇ?, ನನಗೆ ಹಲವಾರು ಬಾರಿ ಕೊಲೆ ಬೆದರಿಕೆಗಳು ಬಂದಿವೆ ಎಂದೂ ಹೇಳಿದರು. ಅಲ್ಲದೇ, ಏಪ್ರಿಲ್ 25ರ ಮೊದಲೇ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನಾನು ಸರ್ಕಾರಕ್ಕೆ ಹೇಳಲು ಬಯಸುತ್ತೇನೆ. ನಾನು ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಸಿಧು ಮೂಸೆವಾಲಾ ತಿಳಿಸಿದರು.

ಮತ್ತೊಂದೆಡೆ, ಕಳೆದ 10 ತಿಂಗಳಲ್ಲಿ ನ್ಯಾಯಕ್ಕಾಗಿ ಹಲವು ಬಾರಿ ಪೊಲೀಸ್ ಮತ್ತು ಸರ್ಕಾರದ ಮೊರೆ ಹೋಗಿದ್ದೇನೆ. ಇದುವರೆಗೆ ಕೇವಲ ನನಗೆ ಭರವಸೆ ನೀಡಲಾಗಿದೆ. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ. ನನ್ನ ಮಗನ ಹತ್ಯೆಯ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇದರಿಂದಾಗಿ ನಾನು ಪತ್ನಿ ಸಮೇತವಾಗಿ ವಿಧಾನಸಭಾಗೆ ಬಂದು ಹೊರಗೆ ಧರಣಿ ನಡೆಸಬೇಕಾಗಿದೆ ಎಂದೂ ಹೇಳಿದರು. ಅಷ್ಟೇ ಅಲ್ಲ, ಶೀಘ್ರ ನ್ಯಾಯ ಸಿಗದಿದ್ದರೆ ವಿಧಾನಸಭಾದ ಹೊರಗೆ ಶಾಶ್ವತ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಿದ್ದು ಮೂಸೆವಾಲಾ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಸಿದ್ದು ಮೂಸೆವಾಲಾ ಪೋಷಕರು, ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಇ-ಮೇಲ್

ABOUT THE AUTHOR

...view details