ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಕೇಸ್‌ನ ಆರೋಪಿಗಳು ತಮ್ಮ ಕೃತ್ಯ ಎಸಗುವ ಮೊದಲು ರಹಸ್ಯವಾಗಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದರು ಎಂದು ದೆಹಲಿ ಪೊಲೀಸ್ ಅಧಿಕಾರಿ ಎಚ್‌ಜಿಎಸ್ ಧಲಿವಾಲ್ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಜೂನ್ 19ರಂದು ಗುಜರಾತ್‌ನ ಕಚ್‌ನಲ್ಲಿ ಬಂಧಿಸಲಾಗಿದೆ. ಗಾಯಕನ ಹತ್ಯೆಗೂ ಮುನ್ನ ಆರೋಪಿಗಳು ಹಲವು ಬಾರಿ ಸ್ಥಳ ಪರಿಶೀಲನೆ ಮತ್ತು ಸಾಕಷ್ಟು ಕಸರತ್ತು ನಡೆಸಿದ್ದರು ಎಂದು ಅವರು ವಿವರಿಸಿದರು. ಬಂಧಿತರಿಂದ ಎಂಟು ಗ್ರೆನೇಡ್‌ಗಳು, ಒಂಬತ್ತು ಎಲೆಕ್ಟ್ರಿಕ್ ಡಿಟೋನೇಟರ್‌ಗಳು, ಮೂರು ಪಿಸ್ತೂಲ್‌ಗಳು ಮತ್ತು ಒಂದು ಅಸಾಲ್ಟ್ ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹರಿಯಾಣದ ಸೋನಿಪತ್ ನಿವಾಸಿ ಪ್ರಿಯವ್ರತ್ ಅಲಿಯಾಸ್ ಫೌಜಿ (26), ಜಜ್ಜರ್ ಜಿಲ್ಲೆಯ ಕಾಶಿಶ್ (24) ಮತ್ತು ಪಂಜಾಬ್‌ನ ಭಟಿಂಡಾ ನಿವಾಸಿ ಕೇಶವ್ ಕುಮಾರ್ (29) ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಇವರಲ್ಲಿ ಇಬ್ಬರು ಶಾರ್ಪ್ ಶೂಟರ್ಗಳಾಗಿದ್ದಾರೆ.