ಸಿಧಿ(ಮಧ್ಯಪ್ರದೇಶ):ಬಸ್ವೊಂದು ಕಾಲುವೆಗೆ ಉರುಳಿ ಬಿದ್ದು 51 ಜನರು ದುರ್ಮರಣಕ್ಕೀಡಾಗಿರುವ ಘಟನೆ ಮಧ್ಯಪ್ರದೇಶದ ಸಿಧಿಯಲ್ಲಿ ಕಳೆದ ಮಂಗಳವಾರ ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವ ದಂಪತಿಗಳಿಬ್ಬರ ಅಂತ್ಯಕ್ರಿಯನ್ನ ಒಂದೇ ಚಿತೆಯಲ್ಲಿ ಒಟ್ಟಿಗೆ ನಡೆಸಲಾಯಿತು.
ಒಂದೇ ಚಿತೆಯಲ್ಲಿ ಸತಿ-ಪತಿ ಅಂತ್ಯಕ್ರಿಯೆ ಸಿಧಿ ಅಪಘಾತದಲ್ಲಿ ದೇವರಿ ಗ್ರಾಮದ ರಾಹುಲ್ ಹಾಗೂ ಆತನ ಪತ್ನಿ ತಪಸ್ವಿ ಸಾವನ್ನಪ್ಪಿದ್ದರು. ಇವರಿಬ್ಬರ ಅಂತ್ಯಕ್ರಿಯೆಯನ್ನ ಇಂದು ಗ್ರಾಮಸ್ಥರೆಲ್ಲರೂ ಸೇರಿ ಒಂದೇ ಚಿತೆಯಲ್ಲಿ ನಡೆಸಲಾಯಿತು. ಈ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಓದಿ: ತಮ್ಮ ವಿರುದ್ಧದ ದೂರನ್ನು ತಪ್ಪಾಗಿ ಅನುವಾದಿಸಿದ ಪುದುಚೆರಿ ಸಿಎಂ!
ರಾಹುಲ್ ತನ್ನ ಪತ್ನಿ ಜತೆ ಪರೀಕ್ಷೆ ಬರೆಯುವ ಉದ್ದೇಶದಿಂದ ಸತಾರಾಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. 25 ವರ್ಷದ ರಾಹುಲ್ ಹಾಗೂ ಆತನ ಪತ್ನಿ ತಪಸ್ವಿ ಕಮಲಾ ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ತಡರಾತ್ರಿ ಇಬ್ಬರ ಮೃತದೇಹ ಗ್ರಾಮಕ್ಕೆ ಬಂದಿದ್ದು, ಇಂದು ಅಂತ್ಯಕ್ರಿಯೆ ನಡೆಸಲಾಗಿದೆ.