ಕರ್ನಾಟಕ

karnataka

ETV Bharat / bharat

ಮೂಲ ಸೌಕರ್ಯಗಳಿಂದ ವಂಚಿತ ಗುಜರಾತಿನ ಈ ಸಿದ್ದಿ ಬುಡಕಟ್ಟು ಸಮುದಾಯ - ಗುಜರಾತ್​ನ ಗಿರ್ ಕಾಂತಾ

ಗುಜರಾತ್​ನ ಗಿರ್ ಕಾಂತಾದ ಜಂಬೂರ್, ಶಿರ್ವನ್, ಮಧುಪುರ್ ಮತ್ತು ತಲಾಲಾ ಪ್ರದೇಶದ ನಾಲ್ಕು ಗ್ರಾಮಗಳಲ್ಲಿ ವಾಸಿಸುತ್ತಿರುವ ಸಿದ್ದಿ ಬುಡಕಟ್ಟು ಸಮುದಾಯದ 400 ಕುಟುಂಬಗಳು ಇಲ್ಲಿಯವರೆಗೆ ಮೂಲ ಸೌಕರ್ಯಗಳ ಕೊರತೆಯಿಂದ ತಮ್ಮ ಅಭಿವೃದ್ಧಿ ಕಾಣದೇ ಅಂಧಕಾರದಲ್ಲೇ ಜೀವನ ನಡೆಸುತ್ತಿವೆ.

Siddi tribal community in Gujarat
ಗುಜರಾತ್​ನ ಸಿದ್ದಿ ಬುಡಕಟ್ಟು ಸಮುದಾಯ

By

Published : Nov 23, 2022, 9:16 PM IST

ಜುನಾಗಢ(ಗುಜರಾತ್ ): ಗುಜರಾತ್​ನ ಸಿದ್ದಿ ಬುಡಕಟ್ಟು ಸಮುದಾಯದ ಅಭಿವೃದ್ಧಿಯು ದೂರದ ಕನಸಾಗಿದೆ. ಸುಮಾರು ಎಂಟು ನೂರು ವರ್ಷಗಳ ಹಿಂದೆ ಸಿದ್ದಿ ಬುಡಕಟ್ಟಿನವರು ಹೆಚ್ಚಾಗಿ ಆಫ್ರಿಕನ್ ದೇಶಗಳಿಂದ ಇಲ್ಲಿಗೆ ಬಂದು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.

ಗುಜರಾತಿನ ನಾಲ್ಕು ಹಳ್ಳಿಗಳಲ್ಲಿ ಈ ಸಮುದಾಯ ನೆಲೆಸಿದ್ದು. ಚುನಾವಣಾ ಸಮಯದಲ್ಲಿ ಇಲ್ಲಿಗೆ ಮತಗಳನ್ನು ಕೇಳಲು ಬರುವ ನಾಯಕರು ಅವರಿಗೆ ಉದಾತ್ತ ಭರವಸೆಗಳನ್ನು ನೀಡುತ್ತಾರೆ. ಆದರೆ ಚುನಾವಣೆಗಳು ಮುಗಿದ ನಂತರ ಎಲ್ಲವನ್ನೂ ಮರೆತು ಬಿಡುತ್ತಾರೆ.

ಅಭಿವೃದ್ಧಿಯನ್ನೇ ಕಾಣದೇ ಜೀವನ ನಡೆಸುತ್ತಿರುವ ಸಿದ್ದಿ ಬುಡಕಟ್ಟು ಸಮುದಾಯ:ಗಿರ್ ಕಾಂತಾದ ಜಂಬೂರ್, ಶಿರ್ವನ್, ಮಧುಪುರ್ ಮತ್ತು ತಲಾಲಾ ಪ್ರದೇಶದ ನಾಲ್ಕು ಗ್ರಾಮಗಳಲ್ಲಿ ವಾಸಿಸುತ್ತಿರುವ ಸಿದ್ದಿ ಬುಡಕಟ್ಟು ಸಮುದಾಯದ 400 ಕುಟುಂಬಗಳು ಇಲ್ಲಿಯವರೆಗೆ ಮೂಲ ಸೌಕರ್ಯಗಳ ಕೊರತೆಯಿಂದ ತಮ್ಮ ಅಭಿವೃದ್ಧಿ ಕಾಣದೇ ಜೀವನ ನಡೆಸುತ್ತಿದ್ದಾರೆ. ಸುಮಾರು 10,000 ಜನಸಂಖ್ಯೆಯ ಬುಡಕಟ್ಟು ಸಮುದಾಯವು ಗಿರ್ ಕಾಂತ ಪ್ರದೇಶದಲ್ಲಿ ನೆಲೆಸಿದೆ.

ಕಳೆದ ಹಲವು ವರ್ಷಗಳಿಂದ ಸಿದ್ದಿ ಬುಡಕಟ್ಟು ಸಮುದಾಯ ಮೂಲ ಸೌಕರ್ಯಕ್ಕಾಗಿ ಹೋರಾಟ ನಡೆಸುತ್ತಿದೆ. ಆದರೆ, ಇವರ ಸಮಸ್ಯೆಗೆ ಆಡಳಿತವರ್ಗ ಗಮನ ಹರಿಸುತ್ತಿಲ್ಲ. ಚುನಾವಣೆ ಬಂತು ಎಂದರೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಈ ಗ್ರಾಮಗಳಿಗೆ ತೆರಳಿ ವಿವಿಧ ಆಶ್ವಾಸನೆ ನೀಡುತ್ತಾರೆ. ಆದರೆ, ಚುನಾವಣೆ ಮುಗಿದ ಮೇಲೆ ಮರೆತು ಹೋಗುತ್ತಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಫರೀದಾಬೆನ್ "ಗ್ರಾಮಕ್ಕೆ ಮೂಲ ಸೌಕರ್ಯಗಳ ಕೊರತೆಯಿದೆ. ರಸ್ತೆ ಇಲ್ಲ, ಜೀವನೋಪಾಯಕ್ಕೆ ಯಾವುದೇ ಮಾರ್ಗವಿಲ್ಲ, ಗ್ರಾಮಕ್ಕೆ ಒಂದು ಪಕ್ಕಾ ಮನೆಯೂ ಇಲ್ಲ." ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷದ ಮುಖಂಡರು ಗ್ರಾಮಸ್ಥರಿಗಾಗಿ ಏನನ್ನೂ ಮಾಡಿಲ್ಲ, ಉದ್ಯೋಗ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಉನ್ನತಿಯ ಎಲ್ಲ ಸಮಸ್ಯೆಗಳು ಗಮನಕ್ಕೆ ಬಂದಿಲ್ಲ’ ಎಂದು ಶಿರವಣ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ನಜ್ಮಾಬೆನ್ ಹೇಳುತ್ತಾರೆ.

ಇದನ್ನೂ ಓದಿ:ಆಗ್ನೇಯ ಏಷ್ಯಾ ಮೊಘಲರ ಆಕ್ರಮಣದಿಂದ ರಕ್ಷಿಸಿದ್ದು ಅಹೋಮ್ ರಾಜವಂಶ: ನಿರ್ಮಲಾ ಸೀತಾರಾಮನ್

ABOUT THE AUTHOR

...view details